Home ಧಾರ್ಮಿಕ ಸುದ್ದಿ ಎಡಮಂಗಲ ಪಂಚಲಿಂಗೇಶರ: ಮಹಾರಥೋತ್ಸವ

ಎಡಮಂಗಲ ಪಂಚಲಿಂಗೇಶರ: ಮಹಾರಥೋತ್ಸವ

1348
0
SHARE

ಕಾಣಿಯೂರು : ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಶನಿವಾರ ರಾತ್ರಿ ಮಹಾರಥೋತ್ಸವ ನಡೆಯಿತು. ದೇವರ ಉತ್ಸವ ಮಹಾರಥೋತ್ಸವ, ಪಾಟಾಳಿಕಟ್ಟೆ ಪೂಜೆ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಟ್ಟೆಪೂಜೆ, ಬಳಿಕ ಮರೋಳಿ ಶ್ರೀ ಶಿರಾಡಿ ದೈವ ಮತ್ತು ಉದ್ರಾಂಡಿ ದೈವಗಳ ಓಲೆ ಸವಾರಿ ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಭೂತ ಬಲಿ ಮತ್ತು, ಶ್ರೀ ದೇವರ ಶಯನೋತ್ಸವ ನಡೆಯಿತು.

ರವಿವಾರ ಬೆಳಗ್ಗೆ ಕವಾಟೋ ದ್ಘಾಟನೆ, ತೈಲಾಭಿಷೇಕ, ಪಂಚಾಮೃತ ಅಭಿಷೇಕ, ಬಳಿಕ ಎಲ್ಯಾರು ದೈವಗಳ ನೇಮ, ಮಿತ್ತೂರು ನಾಯರ್‌ ದೈವಗಳ ನೇಮ, ರಾತ್ರಿ ದೇವರ ಉತ್ಸವ, ಕುಮಾಧಾರಾ ಭಂಡಾರಗಯದಲ್ಲಿ ದೇವರ ಅವಭೃತೋತ್ಸವ, ಧ್ವಜಾವರೋಹಣ ನಡೆಯಿತು.

ಸೋಮವಾರ ಬೆಳಗ್ಗೆ ಗಣಪತಿ ಹವನ, ಕಲಶ ಪೂಜೆ, ರುದ್ರಾಭಿಷೇಕ, ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here