ಸುರತ್ಕಲ್: ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸುರತ್ಕಲ್ ಶಾಖೆ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ದ್ವಾದಶ ಜ್ಯೋತಿರ್ಲಿಂಗ ದರ್ಶನ
ಕಾರ್ಯಕ್ರಮದ ಉದ್ಘಾಟನೆ ಜರಗಿತು. ಶಾಸಕ ಡಾ| ಭರತ್ ಶೆಟ್ಟಿ ವೈ. ಉದ್ಘಾಟಿಸಿ, ಈಶ್ವರೀಯ ವಿಶ್ವ ವಿದ್ಯಾಲಯವು ಜನರು ಮಾನಸಿಕವಾಗಿ ಶಾಂತಿಯಿಂದ ಸಂಸ್ಕಾರ
ವಂತರಾಗಿ ಬಾಳಲು ಪ್ರೇರೇಪಿಸುತ್ತಾ ಉತ್ತಮ ಧಾರ್ಮಿಕ ವಿಚಾರಗಳನ್ನು ತಿಳಿಸುವ ಮುಖೇನ ಹಿಂದೂ ಸಮಾಜದ ಏಳಿಗೆಗೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಹಾ ಶಿವರಾತ್ರಿ ವಿಶೇಷವಾಗಿ ಪ್ರಸಿದ್ಧ ಶಿವ ದೇಗುಲ ವನ್ನು ಒಟ್ಟಿಗೆ ಕಾಣುವ ಸೌಭಾಗ್ಯ ಕಲ್ಪಿಸಿದ್ದಾರೆ.
ಧಾರ್ಮಿಕ ನಂಬಿಕೆಗಳನ್ನು, ಚಿಂತನೆಗಳನ್ನು ಮನಮುಟ್ಟುವಂತೆ ಹೇಳಿ, ಬೆಳೆಸುವ ಉತ್ತಮ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಹಾ ಬಲ ಪೂಜಾರಿ ಕಡಂಬೋಡಿ, ನಿವೃತ್ತ ಮುಖ್ಯ ಶಿಕ್ಷಕಿ ಐ. ಉಮಾದೇವಿ, ಬ್ರಹ್ಮ ಕುಮಾರಿ ವಿಶ್ವೇಶ್ವರಿ, ಸಂಸ್ಥೆಯ ಪದಾ ಧಿಕಾರಿಗಳು,
ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.
ಸುರತ್ಕಲ್ ವಿಭಾಗದ ಮುಖ್ಯಸ್ಥೆ ಪ್ರಭಾ ಸ್ವಾಗತಿಸಿದರು. ರೇವತಿ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಸಾರ್ವಜನಿಕರಿಗೆ ಶಿವರಾತ್ರಿ ಪ್ರಯುಕ್ತ ದೇಶದ ವಿವಿಧೆಡೆ ಇರುವ ಪ್ರಮುಖ ಶಿವ ದೇವಾಲಯಗಳ ಸಂಪೂರ್ಣ ಮಾಹಿತಿ ಮತ್ತು ವೀಕ್ಷಣೆಗೆ ಈಶ್ವರೀಯ ವಿಶ್ವ ವಿದ್ಯಾಲಯ ಮುಕ್ತ ಅವಕಾಶ ಒದಗಿಸಿ¨