Home ಧಾರ್ಮಿಕ ಸುದ್ದಿ ವೈಷ್ಣವಿ ಅಲಂಕಾರದಲ್ಲಿ ಕಂಗೊಳಿಸಿದ ದುರ್ಗಾದೇವಿ

ವೈಷ್ಣವಿ ಅಲಂಕಾರದಲ್ಲಿ ಕಂಗೊಳಿಸಿದ ದುರ್ಗಾದೇವಿ

1656
0
SHARE

ಕೊಪ್ಪ: ಶ್ರೀ ಗಣೇಶ-ದುರ್ಗಾ ಮಹೋತ್ಸವದ ಅಂಗವಾಗಿ ಇಲ್ಲಿನ ಮಾರ್ಕೆಟ್‌ ರಸ್ತೆಯ ಶ್ರೀ ಬಲಮುರಿ ವೀರಗಣಪತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ
ದುರ್ಗಾದೇವಿಗೆ ಭಾನುವಾರ ವೈಷ್ಣವಿ ಅಲಂಕಾರ ಮಾಡಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ದೇವಿ ಪಾರಾಯಣ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ಸಂಜೆ ಪಟ್ಟಣದ ಶ್ರೀನಿ ಮತ್ತು ತಂಡದವರಿಂದ ಸುಗಮ ಸಂಗೀತ ಹಾಗೂ ನಾದಬ್ರಹ್ಮ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಹಮ್ಮಿಕೊಳ್ಳಲಾಗಿತ್ತು.

ಶರನ್ನವರಾತ್ರಿ ಪ್ರಯುಕ್ತ ಹರಿಹರಪುರ ಶ್ರೀಮಠದಲ್ಲಿ ಸರಸ್ವತೀ ಪೂಜಾ, ವೀಣಾಶಾರದಾಲಂಕಾರ ಮಾಡಲಾಗಿತ್ತು. ಸಂಜೆ ವಿದುಷಿ ಶುಭಾ ಸಂತೋಷ್‌ ಬೆಂಗಳೂರು ಇವರಿಂದ ವೀಣಾವಾದನ ಏರ್ಪಡಿಸಲಾಗಿತ್ತು. ರಾತ್ರಿ ಶ್ರೀಚಕ್ರ ಪೂಜೆ, ಶ್ರೀಗಳ ದರ್ಬಾರ್‌, ಮತ್ತು ಅಷ್ಟವಧಾನ ಸೇವೆ ನೆರವೇರಿತು.

LEAVE A REPLY

Please enter your comment!
Please enter your name here