Home ಧಾರ್ಮಿಕ ಸುದ್ದಿ ದುಗ್ಗಲಡ್ಕ: ನಾಗದೇವರ ಶಿಲಾ ಪ್ರತಿಷ್ಠೆ, ಆಶ್ಲೇಷಾ ಬಲಿ

ದುಗ್ಗಲಡ್ಕ: ನಾಗದೇವರ ಶಿಲಾ ಪ್ರತಿಷ್ಠೆ, ಆಶ್ಲೇಷಾ ಬಲಿ

850
0
SHARE

ಸುಳ್ಯ : ದುಗ್ಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದ ವಠಾರದಲ್ಲಿ ನಾಗದೇವರ ಪ್ರತಿಷ್ಠೆ ವಿವಿಧ ಧಾರ್ಮಿಕ ಮತ್ತು ವೈದಿಕ ಕಾರ್ಯಕ್ರಮಗಳೊಂದಿಗೆ ದೇಲಂಪಾಡಿ ಬಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ನಡೆಯಿತು.

ದೇವತಾ ಪ್ರಾರ್ಥನೆ, ವಾಸ್ತು ಹೋಮ, ವಾಸ್ತು ಬಳಿ, ಪುಣ್ಯಾಹವಾಚನ, ಸುದರ್ಶನ ಹೋಮ, ಆಶ್ಲೇಷಾ ಬಲಿ, ಶಯನಪೂಜೆ ನಡೆಯಿತು. ನಾಗದೇವರ ಪ್ರತಿಷ್ಠೆ, ಅಲಂಕಾರ ಅಭಿಷೇಕ, ಆಶ್ಲೇಷಾ ಬಲಿ, ನಾಗತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ದುಗ್ಗಲಾಯ ದೈವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಭಟ್‌, ಸಮಿತಿ ಅಧ್ಯಕ್ಷ ದಯಾನಂದ ಸಾಲಿಯಾನ್‌, ಉಪಾಧ್ಯಕ್ಷ ಯತೀಶ್‌ ರೈ, ಕಾರ್ಯದರ್ಶಿ ಶಿವಪ್ರಸಾದ್‌ ಕುದ್ಪಾಜೆ, ನಾಗನಕಟ್ಟೆ ಸಮಿತಿ ಅಧ್ಯಕ್ಷ ಕಜೆ ಕುಶಾಲಪ್ಪ ಗೌಡ, ಕಾರ್ಯದರ್ಶಿ ರವಿಚಂದ್ರ ಈಶ್ವರಡ್ಕ, ಜತೆ ಕಾರ್ಯದರ್ಶಿ ಧನಂಜಯ ದುಗಲಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here