Home ಧಾರ್ಮಿಕ ಸುದ್ದಿ ದುಗ್ಗಲಾಯ ದೈವಸ್ಥಾನ: ಗೊನೆ ಮುಹೂರ್ತ

ದುಗ್ಗಲಾಯ ದೈವಸ್ಥಾನ: ಗೊನೆ ಮುಹೂರ್ತ

1985
0
SHARE

ಸುಳ್ಯ : ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ವರ್ಷಂಪ್ರತಿ ಯಂತೆ ಮಾ. 19 ಮತ್ತು 20ರಂದು ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದುಗ್ಗಲಾಯ, ಶ್ರೀ ರುದಿರ ಚಾಮುಂಡಿ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕ ಮತ್ತು ನೇಮ ವಿಜೃಂಭಣೆಯಿಂದ ನಡೆಯಲಿದೆ. ಇದರ ಅಂಗವಾಗಿ ಗೊನೆಮುಹೂರ್ತ ನಡೆಯಿತು.

ಮಾ. 18ರಂದು ಅಪರಾಹ್ನ ಹಸಿರುವಾಣಿ ಮೆರವಣಿಗೆ ಮತ್ತು ಉಗ್ರಾಣಮುಹೂರ್ತ ನಡೆಯಲಿದೆ. ಮಾ.19ರಂದು ಪೂರ್ವಾಹ್ನ ಗಣಪತಿ ಹವನ, ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ. ಬಳಿಕ ರಕ್ತೇಶ್ವರಿ, ಸುತ್ತುಕೋಟೆ ಚಾಮುಂಡಿ, ಪಂಜುರ್ಲಿ, ದುಗ್ಗಲಾಯ, ರುದಿರ ಚಾಮುಂಡಿ ದೈವಗಳ ತಂಬಿಲ ನಡೆಯಲಿದ್ದು, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ನಡೆಯಲಿದೆ. ಸಂಜೆ ನಡುಬೆಟ್ಟು ಚಾವಡಿಯಿಂದ ದೈವಸ್ಥಾನಕ್ಕೆ ಭಂಡಾರ ಆಗಮಿಸಲಿದೆ. ರಾತ್ರಿ 9ರಿಂದ ಶ್ರೀ ರುದಿರ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.

ಧಾರ್ಮಿಕ ಉಪನ್ಯಾಸ
ರಾತ್ರಿ 8ಕ್ಕೆ ಕೇರಳ ಹಿಂದೂ ಐಕ್ಯ ವೇದಿಕೆಯ ಸಂಚಾಲಕರಾದ ರವೀಶ ತಂತ್ರಿ ಕುಂಟಾರುರವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಾ. 20ರಂದು ಬೆಳಗ್ಗೆ 10ರಿಂದ ಶ್ರೀ ದುಗ್ಗಲಾಯ ದೈವದ ನೇಮ ನಡೆದು ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here