ಉಪ್ಪಿನಂಗಡಿ: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮರಥ ಕಟ್ಟುವ ಕೆಲಸಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.
ದೇವಸ್ಥಾನದಲ್ಲಿ ಜ. 22ರಂದು ಧ್ವಜಾರೋಹಣ ನಡೆಯಲಿದೆ. ಜ. 26ರಂದು ಬ್ರಹ್ಮರಥೋತ್ಸವ. ಜ. 27ರಂದು ಅವಬೃಥ ಸ್ನಾನದೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದು ಆಡಳಿತ ಮೊಕ್ತೇಸರ ಬೇಕಲ್ ಗಣೇಶ್ ಶೆಣೈ ತಿಳಿಸಿದ್ದಾರೆ. ರಥವನ್ನು ರಥಬೀದಿಯ ಹೋರಾಂಗಣಕ್ಕೆ ತಂದಿರಿದ್ದು, ಸಮಾಜ ಬಾಂಧವರಾದ ವಸಂತ ಶೆಣೈ, ರಾಮಕೃಷ್ಣ ಪ್ರಭು, ಯೋಗೀಶ್ ಶೆಣೈ, ವಿದ್ಯಾಧರ್ ಮಲ್ಯ, ಅಚ್ಯುತ್ ಪಡಿಯಾರ್, ಗೌರವ್ ಪೈ, ವೇಣೂರು ಸತೀಶ್ ಕಾಮತ್, ಗಣೇಶ್ ಆಚಾರ್ಯ, ವಿವೇಕಾನಂದ ಪ್ರಭು ಸಹಕರಿಸಿದರು. ಎಸ್. ಶ್ರೀನಿವಾಸ್ ಭಟ್, ಎಸ್. ವೆಂಕಟೇಶ್ ಭಟ್ ಉಪಸ್ಥಿತರಿದರು.