ಉಳ್ಳಾಲ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಪುನಃ ಪ್ರತಿಷ್ಠೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾಬ್ರಹ್ಮಕಲಶೋತ್ಸವದ ಪೂರ್ವ ಭಾವಿಯಾಗಿ ಹೊರೆ ಕಾಣಿಕೆ ಸಮರ್ಪಣಾ ಸಮಿತಿ ಉಳ್ಳಾಲ ವಲಯ “ಪುರಾಲ್ಗ… ಹೊರೆ ದಿಬ್ಬಣ’ದ ಸಂಗ್ರಹಣೆ ಕೇಂದ್ರಕ್ಕೆ ತೊಕ್ಕೊಟ್ಟು ಭಟ್ನಾಗರ ಜೈ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅರ್ಚಕ ಮಂಜಪ್ಪ ಕಾರ್ನವ ಮತ್ತು ಶ್ರೀ ವೈದ್ಯನಾಥ ದೈವಸ್ಥಾನದ ಅರ್ಚಕ ಮುಂಡ ಪೂಜಾರಿ ಅವರು ಚಾಲನೆ ನೀಡಿದರು.
ಈ ಸಂದರ್ಭ ಪೊಳಲಿ ಕ್ಷೇತ್ರ ಕೇಂದ್ರ ಸಮಿತಿ ಸಂಚಾಲಕಿ ಆಶಾಜ್ಯೋತಿ ರೈ, ಉಳ್ಳಾಲ ಶ್ರೀ ಚೀರುಂಭ ಭಗವತೀ ತೀಯಾ ಸಮಾಜದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಕ್ಷೇತ್ರದ ಅಧ್ಯಕ್ಷ ಪ್ರಕಾಶ್ ಉಳಿಯ, ಹೊರೆಕಾಣಿಕೆ ಸಮರ್ಪಣೆ ಸಮಿತಿಯ ಉಳ್ಳಾಲ ವಲಯ ಅಧ್ಯಕ್ಷ ಚಂದ್ರಹಾಸ ಅಡ್ಯಂತಾಯ, ಕುತ್ತಾರುಗುತ್ತು, ಗೌರವಾಧ್ಯಕ್ಷ ವಿಟ್ಠಲ ಶ್ರೀಯಾನ್, ಗೌರವ ಸಲಹೆಗಾರ ಕೆ.ಟಿ. ಸುವರ್ಣ, ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂಚಾಲಕ ಸುರೇಶ್ ಸಾಲ್ಯಾನ್, ದಿನೇಶ್ ರೈ ಕಳ್ಳಿಗೆ, ಸುರೇಂದ್ರ ಶೆಟ್ಟಿ ಮಂಚಿಲಗುತ್ತು, ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಧನಲಕ್ಷ್ಮೀ ಗಟ್ಟಿ, ಉಪಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು, ಅಜಂತಾ ಪಿಲಾರ್, ಚಂದ್ರಹಾಸ ಪಂಡಿತ್ಹೌಸ್, ಸತೀಶ್ ಕುಂಪಲ, ರಾಜೇಶ್ ಯು.ಬಿ., ಪುರುಷೋತ್ತಮ ಕಲ್ಲಾಪು, ಜೀವನ್ ತೊಕ್ಕೊಟ್ಟು, ಪುರುಷೋತ್ತಮ ಗಟ್ಟಿ, ಪ್ರಶಾಂತ್ ಕಾಪಿಕಾಡ್, ಆನಂದ ಶೆಟ್ಟಿ ತೊಕ್ಕೊಟ್ಟು, ಪ್ರವೀಣ್ ಎಸ್. ಕುಂಪಲ ಉಪಸ್ಥಿತರಿದ್ದರು.