ಉಳ್ಳಾಲ: ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ರಾಮಾಯಣ ಮಾಸಾಚರಣೆಯ ಅಂಗವಾಗಿ ಹರಿಕಥಾ ಸತ್ಸಂಗವನ್ನು ಸಮಿತಿಯ ಗೌರವ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹಾಗೂ ಮಾಜಿ ಶಾಸಕ ಜಯರಾಮ ಶೆಟ್ಟಿ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ಹರಿದಾಸ ಮಾಡೂರು, ಸಮಿತಿಯ ಗೌರವ ಸಲಹೆಗಾರ ಗೋಪಾಲ್ ಕುತ್ತಾರ್, ದೇವಸ್ಥಾನದ ಅಧ್ಯಕ್ಷ ವಾಸು ಕುತ್ತಾರು ಹಾಗೂ ಪ್ರ.ಕಾ.ನಾರಾಯಣ ಕುಂಪಲ ಉಪಸ್ಥಿತರಿದ್ದರು. ಹರಿಕಥಾ ಕಾರ್ಯಕ್ರಮವನ್ನು ಶ್ರೀ ಮಾತಾ ಸೇವಾಶ್ರಮ ನೀರೊಳಿಕೆಯ ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೊರು ನಡೆಸಿಕೊಟ್ಟರು.