Home ಧಾರ್ಮಿಕ ಸುದ್ದಿ ಕುಕ್ಕುಂದೂರು ಉತ್ಸವಕ್ಕೆ ಚಾಲನೆ

ಕುಕ್ಕುಂದೂರು ಉತ್ಸವಕ್ಕೆ ಚಾಲನೆ

335
0
SHARE

ಕಾರ್ಕಳ: ಕುಕ್ಕುಂದೂರು ಉತ್ಸವ ಸಮಿತಿ ಆಯೋಜಿಸುವ ಕುಕ್ಕುಂದೂರು ಗ್ರಾಮೋತ್ಸವಕ್ಕೆ ನ. 6ರಂದು ಚಾಲನೆ ನೀಡಲಾಯಿತು.ಶಾಸಕ ವಿ. ಸುನಿಲ್‌ ಕುಮಾರ್‌ ಅವರು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಕಳದ ಅಭಿವೃದ್ಧಿಯ ಜತೆಯಲ್ಲಿ ಜನರಿಗೆ ಖುಷಿ ನೀಡುವಂತಹ ಮನೋರಂಜನೆ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಅರ್ಥವಿದೆ. ಇದರ ಪ್ರಯೋಜನವನ್ನು ಕುಕ್ಕುಂದೂರು ಹಾಗೂ ಆಸುಪಾಸಿನ ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.

ಗ್ರಾ.ಪಂ. ಉಪಾಧ್ಯಕ್ಷ ರಾಜೇಶ್‌ ರಾವ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವರ್ಣ ಕಾರ್ಕಳದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಒಂದು ಪುಟ್ಟ ಪ್ರಯತ್ನವನ್ನು ಮಾಡಿಲಾಗಿದೆ. ಮುಂದಿನ ವರ್ಷದಿಂದ ಗ್ರಾಮ ಉತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸುವ ಆಕಾಂಕ್ಷೆ ಹೊಂದಿದ್ದು, ಇದಕ್ಕೆ ಕುಕ್ಕುಂದೂರಿನ ಜನತೆಯ ಸಹಕಾರವನ್ನು ಕೋರಿದರು.

ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ನ್ಯಾಯವಾದಿ ದಯಾನಂದ ನಾಯಕ್‌, ಜ್ಯೋತಿ ಜಗನ್ನಾಥ ಪೈ ಅವರು ಮಾತನಾಡಿದರು. ತಾ.ಪಂ.
ಸದಸ್ಯ ಅಶೋಕ್‌ ಶೆಟ್ಟಿ, ಅಂತೋನಿ ಡಿಸೋಜಾ ನಕ್ರೆ, ಉದ್ಯಮಿಗಳಾದ ಯುವರಾಜ ಶೆಟ್ಟಿ, ಭರತ್‌ ಶೆಟ್ಟಿ ವೃಷಭರಾಜ ಕಡಂಬ, ಗ್ರಾ.ಪಂ. ಸದಸ್ಯ ಯೋಗೀಶ್‌ ಸಾಲಿಯಾನ್‌ ಉಪಸ್ಥಿತರಿದ್ದರು. ಉತ್ಸವ ನ. 30ರ ವರೆಗೆ ನಡೆಯಲಿದ್ದು, ಪ್ರತೀ ದಿನ 5.30 ರಿಂದ 10.30ರ ವರೆಗೆ ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮಗಳು
ಜರಗಲಿದೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here