Home ಧಾರ್ಮಿಕ ಸುದ್ದಿ ಧಾಮ ಸಂಪ್ರೋಕ್ಷಣೆ, ಪುನಃ ಪ್ರತಿಷ್ಠೆ ಮಹೋತ್ಸವಕ್ಕೆ ಚಾಲನೆ

ಧಾಮ ಸಂಪ್ರೋಕ್ಷಣೆ, ಪುನಃ ಪ್ರತಿಷ್ಠೆ ಮಹೋತ್ಸವಕ್ಕೆ ಚಾಲನೆ

972
0
SHARE

ಪುಂಜಾಲಕಟ್ಟೆ : ಸಿದ್ಧಕಟ್ಟೆ ನಲ್ಲೂರಂಗಡಿ ಯಲ್ಲಿರುವ ಭಗವಾನ್‌ 1008 ಶ್ರೀ ಅನಂತನಾಥ ಸ್ವಾಮಿ ಬಸದಿಯಲ್ಲಿ ಎ. 9ರ ವರೆಗೆ ನಡೆಯಲಿರುವ ಧಾಮ ಸಂಪ್ರೋಕ್ಷಣೆ ಮತ್ತು ಪುನಃಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಕಾರ್ಕಳ ಜೈನಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಅವರ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ವಿವಿಧ ಜೈನ ಆಗಮೋಕ್ತ ವಿಧಿವಿಧಾನಗಳು ನಡೆದವು. ಪ್ರತಿಷ್ಠಾ ಪುರೋಹಿತ ಚಂದ್ರನಾಥ ಇಂದ್ರ ಅವರ ನೇತೃತ್ವದಲ್ಲಿÉ ಮತ್ತು ಸಿದ್ಧಕಟ್ಟೆ ಎಲಿಯ ಮಾಗಣೆಯ ಜೈನ ಶ್ರಾವಕರ ಪ್ರಾಯೋಜಕತ್ವದಲ್ಲಿ ಧಾರ್ಮಿಕ ಪೂಜೆಗಳು ನಡೆದವು.

ಬೆಳಗ್ಗೆ ಇಂದ್ರ ಪ್ರತಿಷ್ಠೆ, 8.30ಕ್ಕೆ ತೋರಣ ಮುಹೂರ್ತ, ಶ್ರೀ ಅನಂತನಾಥ ಸ್ವಾಮಿ ಮತ್ತು ಪಾರ್ಶ್ವನಾಥ ಸ್ವಾಮಿ ಬಸದಿಗಳಲ್ಲಿ ವಿಮಾನ ಶುದ್ಧಿ, ದಶದಿಕಾ³ಲಕರ ಶುದ್ಧಿ, ಸ್ಥಾಪನೆ ಮಧ್ಯಾಹ್ನ 12.10ಕ್ಕೆ ಮುಖವಸ್ತ್ರ ಉದ್ಘಾಟನೆ, ನಾಂದಿಮಂಗಲ ವಿಧಾನ, ಸಂಜೆ 5.15ಕ್ಕೆ ಕ್ಷೇತ್ರಪಾಲ ಪ್ರತಿಷ್ಠೆ ಮತ್ತು ನಾಗಪ್ರತಿಷ್ಠೆ, ಮಹೋತ್ಸವ, ಭಗವಾನ್‌ ಶ್ರೀ ಅನಂತನಾಥ ಸ್ವಾಮಿಗೆ 54 ಕಲಶಗಳಿಂದ ಅಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಕೇಸರಿ ರತ್ನರಾಜಯ್ಯ ಧಾರ್ಮಿಕ ಉಪನ್ಯಾಸಕರಾಗಿ, ಡಾ| ರಾಜೇಶ್ವರಿ ಪುತ್ತೂರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿದ್ಧಕಟ್ಟೆ ಅನಂತಪದ್ಮ ಮಹಿಳಾ ಸಂಘ ಮತ್ತು ಸ್ಥಳೀಯ ಶ್ರಾವಕಿಯರಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆದವು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್‌, ಬಸದಿಯ ಆಡಳಿತ ಮಂಡಳಿ ಅಧ್ಯಕ್ಷ ಭೋಜ ಕೆ. ಸಂಗಬೆಟ್ಟು ಹೊಸಮನೆ, ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಜಯರಾಜ ಹೆಗ್ಡೆ ಪುತ್ತಿಲ, ಪ್ರ. ಕಾರ್ಯದರ್ಶಿ ಅರ್ಕಕೀರ್ತಿ ಇಂದ್ರ, ಮೊಕ್ತೇಸರ ಪ್ರಕಾಶ್‌ ಜೈನ್‌ ಜಂಕಳ, ನ್ಯಾಯವಾದಿ ಶ್ರೇಯಾಂಸ ಕುಮಾರ್‌, ಸಹಕಾರಿ ಸಂಘಗಳ ಕಾನೂನು ಸಲಹೆಗಾರ ಅಪರಾಜಿತ ಆರಿಗ, ಅರ್ಕುಳ ಬೀಡಿನ ರತ್ನರಾಜ ಜೈನ್‌, ಸಮಿತಿ ಕಾರ್ಯದರ್ಶಿ ವಿನಯಚಂದ್ರ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಸುದರ್ಶನ ಜೈನ್‌, ಜೀರ್ಣೋದ್ಧಾರ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here