Home ಧಾರ್ಮಿಕ ಸುದ್ದಿ ಹೆಬ್ರಿ ಶ್ರೀರಾಮ ಮಂಟಪ: ಭಜನ ಶತಮಾನೋತ್ಸವಕ್ಕೆ ಕಾಶೀ ಶ್ರೀಗಳಿಂದ ಚಾಲನೆ

ಹೆಬ್ರಿ ಶ್ರೀರಾಮ ಮಂಟಪ: ಭಜನ ಶತಮಾನೋತ್ಸವಕ್ಕೆ ಕಾಶೀ ಶ್ರೀಗಳಿಂದ ಚಾಲನೆ

651
0
SHARE

ಹೆಬ್ರಿ : ಹೆಬ್ರಿ ಶ್ರೀರಾಮ ಮಂಟಪ ಗೌಡ ಸಾರಸ್ವತ ಬ್ರಾಹ್ಮಣ ಸಭಾದ ವತಿಯಿಂದ 100ನೇ ವರ್ಷದ ಏಕಾಹ ಭಜನೆಯ ಅಂಗವಾಗಿ ಜನವರಿ 26ರಿಂದ ಜ. 29ರ ವರೆಗೆ ಹೆಬ್ರಿ ರಾಮಮಂದಿರದಲ್ಲಿ ನಡೆಯುತ್ತಿರುವ ಭಜನ ಶತಮಾನೋತ್ಸವ ಕಾರ್ಯಕ್ರಮವನ್ನು ಶನಿವಾರ ಕಾಶೀ ಮಠ ಸಂಸ್ಥಾನದ ಮಠಾಧೀಶ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಭಜನೆಯಿಂದ ಸಮಾಜದ ಒಗ್ಗೂಡುವಿಕೆಯೊಂದಿಗೆ ಇಷ್ಟಾರ್ಥ ಸಿದ್ಧಿಯಾಗಲು ಸಾಧ್ಯ. ನಿರಂತರ ಭಜನೆಯ ಮೂಲಕ 100ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಹೆಬ್ರಿಯ ಸಮಾಜ ಬಾಂಧವರು ಪುಣ್ಯ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಭಗವಂತನ ವಿಶೇಷ ಕೃಪೆಗೆ ಪಾತ್ರರಾಗಿದ್ದಾರೆ ಎಂದರು.

ಶ್ರೀಗಳ ಪಾದಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ದೀಪ ನಮಸ್ಕಾರ, ರಾತ್ರಿ ಪೂಜೆ, ಅಹೋರಾತ್ರಿ ಭಜನೆ ನಡೆಯಿತು. ಎರಡು ದಿನಗಳ ಕಾಲ ನಡೆಯುವ ಅಖಂಡ ಭಜನ ಕಾರ್ಯಕ್ರಮದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ಭಜನ ತಂಡಗಳು ಭಾಗವಹಿಸಲಿವೆ.

ಹೆಬ್ರಿ ಶ್ರೀರಾಮ ಮಂಟಪ ಗೌಡ ಸಾರಸ್ವತ ಬ್ರಾಹ್ಮಣ ಸಭಾದ ಅಧ್ಯಕ್ಷ ಗುಂಡೂ ನಾಯಕ್‌, ಕಾರ್ಯದರ್ಶಿ ಎಚ್‌. ಗಣೇಶ್‌ ನಾಯಕ್‌, ನರೇಂದ್ರ ನಾಯಕ್‌, ಪದ್ಮನಾಭ ನಾಯಕ್‌, ಸುದೇಶ್‌ ಪ್ರಭು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here