ಉಡುಪಿ,: ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶರನ್ನವರಾತ್ರಿಯ ಎರಡನೇ ದಿನ ಜೋಡಿ ಚಂಡಿಕಾಯಾಗ ಹಾಗೂ ವಿದ್ಯಾಮಂತ್ರ ಪಾಯಸ ಹೋಮ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಸಂಪನ್ನಗೊಂಡಿತು.
ಚಂಡಿಕಾ ಹೋಮ ಮುಂಬಯಿಯ ದಿವ್ಯಾ, ಸಂಜೀವ್ ಕುಲಕರ್ಣಿ ಮತ್ತು ಉಡುಪಿಯ ವಿವೇಕ್ ರಾವ್ ಹಾಗೂ ನಳಿನಿ ಅವರಿಂದ ನೆರವೇರಿದರೆ, ವಿದ್ಯಾಮಂತ್ರ ಪಾಯಸ ಹೋಮ ಉದ್ಯಾವರದ ನಿಮಿಕ್ಷ ಅವರಿಂದ ನೆರವೇರಿತು.
ಮಧ್ಯಾಹ್ನ ಮಹಾಪೂಜೆಯ ಬಳಿಕ ಮಣಿಪಾಲದ ಹೆಜ್ಜೆ ಗೆಜ್ಜೆಯ ಅನಿತಾ ರಾಜೇಂದ್ರನ್ ಹಾಗೂ ಕಡಿಯಾಳಿಯ ಡಾ| ಮಂಜರಿ ಚಂದ್ರ ಅವರ ಶಿಷ್ಯೆ ಧನ್ಯಶ್ರೀ ಭಟ್ ಹಾಗೂ ಸ್ವಾತಿ ಆಚಾರ್ಯ ಅವರಿಂದ ನೃತ್ಯ ಕಾರ್ಯಕ್ರಮ ಜರಗಿತು. ಸಂಜೆ ಮುಂಬಯಿಯ ರತ್ನಾಕರ್ ಶೆಟ್ಟಿ ಮತ್ತು ಮನೆಯವರಿಂದ ರಂಗಪೂಜೆ, ಬೈಲೂರಿನ ಸಂಜೀವ ಪೂಜಾರಿಯವರಿಂದ ದುರ್ಗಾ ನಮಸ್ಕಾರ ಪೂಜೆ ನಡೆಯಿತು.
ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಡುಪಿಯ ಕಲಾನಿಧಿ ತಂಡದಿಂದ ಸಂಗೀತ ಸೌರಭ ಹಾಗೂ ಮಾತನಾಡುವ ಗೊಂಬೆಯೊಂದಿಗೆ
ವಿಶೇಷ ಕಾರ್ಯಕ್ರಮ ನಡೆಯಿತು. ಅನ್ನಸಂತರ್ಪಣೆಯಲ್ಲಿ ಸಹಸ್ರ ಸಂಖ್ಯೆಗೂ ಮಿಕ್ಕಿದ ಭಕ್ತರು ಪಾಲ್ಗೊಂಡರು ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.