Home ಧಾರ್ಮಿಕ ಸುದ್ದಿ ಡೋಣಗಾಂವ: ಭಕ್ತಮುಡಿ ತಪೋವನ ಮಹಾಳಪ್ಪಯ್ಯ ಜಾತ್ರೆ ನಾಳೆ

ಡೋಣಗಾಂವ: ಭಕ್ತಮುಡಿ ತಪೋವನ ಮಹಾಳಪ್ಪಯ್ಯ ಜಾತ್ರೆ ನಾಳೆ

1090
0
SHARE

ಕಮಲನಗರ: ಡೋಣಗಾಂವ(ಎಂ) ಗ್ರಾಮದ ಭಕ್ತಮುಡಿ ತಪೋವನ ಮಹಾಳ್ಳಪಯ್ಯ ದೇವಸ್ಥಾನದ ಜಾತ್ರಾ ಮಹೋತ್ಸವ ನ. 23ರಂದು ನಡೆಯಲಿದೆ ಎಂದು ಡೋಣಗಾಂವ ಮಠದ ಪೀಠಾಧಿಪತಿ ಡಾ| ಶಂಭುಲಿಂಗ ಶಿವಾಚಾರ್ಯರು ತಿಳಿಸಿದ್ದಾರೆ.

ಪ್ರತಿನಿತ್ಯ ಬೆಳಗ್ಗೆ 7:00ರಿಂದ 9:00ರ ವರೆಗೆ ಪಾರಾಯಣ, 9:00ರಿಂದ 12:00ರ ವರೆಗೆ ಹಾವಗಿಸ್ವಾಮಿ ಸಂಗೀತ ಮಹಾರುದ್ರಾಭಿಷೇಕ, 3:00ರಿಂದ 5:00ರ ವರೆಗೆ ಗಾಥಾ ಭಜನ ಮತ್ತು ಕೀರ್ತನೆ, ಪ್ರವಚನ, ಶಿವಕೀರ್ತನೆ‌ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಮಲನಗರ ತಾಲೂಕಿನಿಂದ ಸುಮಾರು 10 ಕಿಮೀ ದೂರದಲ್ಲಿರುವ ಮಹಾಳಪ್ಪಯ್ಯ ದೇವಸ್ಥಾನ ಪ್ರೇಕ್ಷಣೀಯ ಸ್ಥಳವಾಗಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಲಕ್ಷಾಂತರ ಭಕ್ತಾಧಿಗಳು ಬಂದು ಸರದಿಯಲ್ಲಿ ನಿಂತು ದರ್ಶನ ಪಡೆದು ಪುನೀತರಾಗುತ್ತಾರೆ.

ನ. 23ರಂದು ಬೆಳಗ್ಗೆ 11:00ಕ್ಕೆ ಡಾ| ಶಂಭುಲಿಂಗ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮತ್ತು ಹೇಡಗಾಪುರದ ಶಿವಲಿಂಗ ಶಿವಾಚಾರ್ಯ ಅವರ ಅಧ್ಯಕ್ಷತೆಯಲ್ಲಿ ಧರ್ಮಸಭೆ ನಡೆಯಲಿದೆ. ಅಲ್ಲದೆ ಪಶು ಪ್ರದರ್ಶನ ಮತ್ತು ಜಂಗಿ ಕುಸ್ತಿ ನಡೆಯಲಿದ್ದು, ಮಹಾರಾಷ್ಟ್ರದ ಲಾತೂರ, ನಾಂದೇಡ, ಹಣೆಗಾಂವ, ದೇವಣಿ, ಮುಕ್ರಮಬಾದ, ದೇಗಲೂರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದ ಕುಸ್ತಿ ಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಠದ ಉಮಾಕಾಂತ ದೇಶಿ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

LEAVE A REPLY

Please enter your comment!
Please enter your name here