ಉಡುಪಿ: ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶುಕ್ರವಾರ ನಾಗ ಬ್ರಹ್ಮಮಂಡಲೋತ್ಸವ ಸಂಪನ್ನಗೊಂಡಿತು. ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇ| ಮೂ| ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ, ನಾಗಪಾತ್ರಿ ಕಲ್ಲಂಗಳ ರಾಮಚಂದ್ರ ಕುಂಜತ್ತಾಯ, ಕನ್ನಿಕೆಯಾಗಿ ಬಾಲಕೃಷ್ಣ ವೈದ್ಯ ಪಾಲ್ಗೊಂಡಿದ್ದರು.
ಬೆಳಗ್ಗಿನಿಂದಲೇ ಉಪಾಹಾರ ಆರಂಭಗೊಂಡು, ರಾತ್ರಿ ತನಕವೂ ನಿರಂತರವಾಗಿ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು. ನವಶಕ್ತಿ ವೇದಿಕೆಯಲ್ಲಿ ಬಲೇ ತೆಲಿಪಾಲೆ ಖ್ಯಾತಿಯ ಮಸ್ಕಿರಿ ಕುಡ್ಲ ತಂಡದ ದೀಪಕ್ ರೈ
ಪಾಣಾಜೆ ಮತ್ತು ತಂಡದವರಿಂದ “ತೆಲಿಕೆ ಬಂಜಿ ನಿಲಿಕೆ’ ಹಾಸ್ಯ ಕಾರ್ಯಕ್ರಮ ಜರಗಿತು.