Home ಧಾರ್ಮಿಕ ಸುದ್ದಿ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ನ. 26ರಂದು ದೀಪೋತ್ಸವ

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ನ. 26ರಂದು ದೀಪೋತ್ಸವ

1486
0
SHARE

ಉಡುಪಿ : ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನ. 26ರ ಕಾರ್ತಿಕ ಅಮಾವಾಸ್ಯೆಯಂದು ದೀಪೋತ್ಸವ ನೆರವೇರಲಿದೆ. ಮಧ್ಯಾಹ್ನ ಕ್ಷೇತ್ರದ ವತಿಯಿಂದ ವಿಶೇಷ ಪೂಜಾದಿಗಳು, ಸಂಜೆ ಭಜನೆ ಸಂಕೀರ್ತನೆ, ರಂಗಪೂಜಾ ಮಹೋತ್ಸವ ವೇ|ಮೂ| ಕೃಷ್ಣಮೂರ್ತಿ ತಂತ್ರಿ ಅವರ ನೇತೃತ್ವದಲ್ಲಿ ನೆರವೇರಲಿದ್ದು, ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ದೀಪೋತ್ಸವದಲ್ಲಿ ಪಾಲ್ಗೊಳ್ಳಲಿರುವ ಭಕ್ತರು ಸಾಮೂಹಿಕವಾಗಿ ಎಣ್ಣೆ ಮತ್ತು ಬತ್ತಿಯನ್ನು ಸಮರ್ಪಿಸಬಹುದೆಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ತಿಳಿಸಿದ್ದಾರೆ.

ಅಂಧಕಾರ ನೀಗುವ “ದೀಪ’ ಕತ್ತಲನ್ನು ನಾಶಗೊಳಿಸುವ ದೀಪವು ಆನಂದ ಮತ್ತು ಜ್ಞಾನದ ಪ್ರತೀಕ. ಪಾಪನಾಶದ ಸಂಕೇತವಲ್ಲದೆ, ಅಂಧಕಾರ ದಿಂದ ಬೆಳಕಿನತ್ತ ಮುನ್ನಡೆಸುವ ಸೂಚಕವಾಗಿದೆ. ದೀಪವು ಸಣ್ತೀಗುಣ, ತಮೋಗುಣ, ರಜೋಗುಣವೆಂಬ ಗುಣತಣ್ತೀಗಳನ್ನು ಒಳಗೊಂಡಿದ್ದು, ದೀಪದ ಕೆಳಭಾಗದಲ್ಲಿ ಸತ್ವಗುಣವೂ, ಮಧ್ಯಭಾಗದಲ್ಲಿ ತಮೋಗುಣವೂ, ಮೇಲ್ಭಾಗದಲ್ಲಿ ರಜೋಗುಣವೂ ಶೋಭಿಸುತ್ತದೆ. ಅಂತಹ ದಿವ್ಯಶಕ್ತಿಯುಳ್ಳ ದೀಪವನ್ನು ಭಕ್ತಿ-ಶ್ರದ್ಧೆಯಿಂದ ಶ್ರೀ ದೇವರಿಗೆ ಬೆಳಗಿದಾಗ ಮನಸ್ಸು ಉಲ್ಲಾಸಭರಿತವಾಗಲಿದೆ.

ಮಣ್ಣಿನ ಹಣತೆಯಲ್ಲಿ ಎಣ್ಣೆ ಹಾಕಿ ಬತ್ತಿ ಹೊತ್ತಿಸಿ ಕಾರ್ತಿಕ ಮಾಸದಲ್ಲಿ ಭಕ್ತಿಯಿಂದ “ದೀಪೋತ್ಸವ’ ಆಚರಿಸಿದಾಗ ವಿಶೇಷ ಫ‌ಲ ಲಭಿಸುತ್ತದೆ. ದೀಪದಲ್ಲಿ ಸಾಕ್ಷಾತ್‌ ಶ್ರೀದೇವಿ ಸಾನಿಧ್ಯ ಇರುವುದರಿಂದ ದೀಪವನ್ನು ಹಚ್ಚಿ ಪೂಜಿಸಲಾಗುತ್ತದೆ.

LEAVE A REPLY

Please enter your comment!
Please enter your name here