Home ಧಾರ್ಮಿಕ ಸುದ್ದಿ ಉಜಿರೆ -ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ ವೈಭವದ ಪಾದಯಾತ್ರೆ

ಉಜಿರೆ -ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ ವೈಭವದ ಪಾದಯಾತ್ರೆ

677
0
SHARE

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ ಭಕ್ತರು ಪಾದಯಾತ್ರೆ ಯಲ್ಲಿ ಹೆಜ್ಜೆ ಹಾಕಿದರು.

ಲಕ್ಷದೀಪೋತ್ಸವ ಪಾದಯಾತ್ರೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪಾದ ಯಾತ್ರೆಗೆ ನ. 22ರಂದು ಅಪರಾಹ್ನ 3.30ಕ್ಕೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ಕ್ಷೇತ್ರದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಚಾಲನೆ ನೀಡಿದರು. ಶಾಸಕ ಹರೀಶ್‌ ಪೂಂಜ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಸಾಥ್‌ ನೀಡಿದರು.

ಮಹಾತ್ಮಾ ಗಾಂಧೀಜಿ 150ನೇ ಜನ್ಮ ದಿನಾಚರಣೆ ಸುಸಂದರ್ಭ ಸ್ವಚ್ಛತೆಯ ಕಲ್ಪನೆಯೊಂದಿಗೆ 7ನೇ ವರ್ಷದ ಪಾದ ಯಾತ್ರೆ ಹಮ್ಮಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಗಾಂಧೀಜಿಯವರ ಕಲ್ಪನೆಯಂತೆ ಖಾದಿ ವಸ್ತ್ರಧಾರಿಗಳಾಗಿ ಗಾಂಧಿ ಟೋಪಿ ಧರಿಸಿ ಪಾದಯಾತ್ರೆಯಲ್ಲಿ ಭಕ್ತರು ಸಾಗಿ ಬಂದರು.

ಶ್ರೀಕ್ಷೇತ್ರ ಧ.ಗ್ರಾ ಯೋಜನೆಯ ನಿರ್ದೇಶಕ ಡಾ| ಎಲ್ .ಎಚ್‌. ಮಂಜುನಾಥ್‌, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಪ್ರತಾಪ್‌ಸಿಂಹ ನಾಯಕ್‌, ಎಸ್‌ಡಿಎಂ ಎಜುಕೇಶನ್‌ ಟ್ರಸ್ಟ್‌ನ ಕಾರ್ಯ ನಿರ್ವಹಣಾಧಿಕಾರಿ ಶಶಿಧರ್‌ ಶೆಟ್ಟಿ, ಎಸ್‌ಡಿಎಂ ಕಾಲೇಜಿನ ಉಪನ್ಯಾಸ ಡಾ| ಶ್ರೀಧರ ಭಟ್‌, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌, ಉದ್ಯಮಿಗಳಾದ ರಾಜೇಶ್‌ ಪೈ ಉಜಿರೆ, ಮೋಹನ್‌ ಕುಮಾರ್‌, ಸುಬ್ರಾಯ ಶೆಣೈ, ಗ್ರಾಮಾಭಿೃವೃದ್ಧಿ ಯೋಜನೆಯ ಶ್ರೀಹರಿ, ಮಮತಾ ರಾವ್‌, ಜಯಕರ್‌ ಶೆಟ್ಟಿ, ಯಶವಂತ್‌, ನಿವೃತ್ತ ಎಸ್‌.ಪಿ. ಪೀತಾಂಬರ ಹೆರಾಜೆ, ಗ್ರಾಮೀಣ ಶ್ರೇಷ್ಠತ ಕೇಂದ್ರ ನಿರ್ದೇಶಕ ಬೂದಪ್ಪ ಗೌಡ, ಜಿ.ಪಂ. ಸದಸ್ಯರಾದ ಧರಣೇಂದ್ರ ಕುಮಾರ್‌, ಸೌಮ್ಯಲತಾ, ಉದ್ಯಮಿ ಪ್ರಶಾಂತ್‌ ಜೈನ್‌, ರೋಟರಿ ಅಧ್ಯಕ್ಷ ಜಯರಾಮ್‌ ಎಸ್‌., ಲಯನ್ಸ್‌ ಕ್ಲಬ್‌ ಅಧ್ಯಕ್ಷ ವಸಂತ ಶೆಟ್ಟಿ, ನ್ಯಾಯವಾದಿ ಧನಂಜಯ ರಾವ್‌, ಡಾ| ಎಂ.ಎನ್‌. ದಯಾಕರ್‌, ಎಸ್‌ಡಿಎಂ ಕಾಲೇಜಿನ ನಿವೃತ್ತ
ಪ್ರಾಂಶುಪಾಲ ಮೋಹನ್‌, ಶಶಿಧರ ಡೋಂಗ್ರೆ, ತಾ.ಪಂ ಸದಸ್ಯರು ಸಹಿತ ಸಾವಿರಾರು ಭಕ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here