Home ಧಾರ್ಮಿಕ ಸುದ್ದಿ ಧರ್ಮಸ್ಥಳ: ಬಸದಿಯಲ್ಲಿ ವಾರ್ಷಿಕ ಪೂಜೆ

ಧರ್ಮಸ್ಥಳ: ಬಸದಿಯಲ್ಲಿ ವಾರ್ಷಿಕ ಪೂಜೆ

1087
0
SHARE

ಬೆಳ್ತಂಗಡಿ: ಧರ್ಮಸ್ಥಳದ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಯಲ್ಲಿ ವಾರ್ಷಿಕ ಪೂಜೆ ನಡೆಯಿತು.

ಗುರುವಾರ ತೋರಣ ಮುಹೂರ್ತ, ವಿಮಾನ ಶುದ್ಧಿ ನವಕಲಶಾಭಿಷೇಕ, ನಾಂದಿ ಮಂಗಳ ಪೂಜಾ ವಿಧಾನ, ಶುಕ್ರವಾರ ಋಷಿಮಂಡಲ ಆರಾಧನೆ, ವಾಸ್ತು ಪೂಜಾ ವಿಧಾನ, ಷೋಡಶ ಕಲಶಾಭಿಷೇಕ, ನವಗ್ರಹ ಶಾಂತಿ, ಶನಿವಾರ ಸಾಮೂಹಿಕ ಪಂಚಕುಲ ದೇವಿಯರ ಶತಾಷ್ಟ ನಾಮಾವಳಿ ಪಠಣ ಆರಾಧನೆ ನಡೆಯಿತು. ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿಗೆ 108 ಕಲಶಾಭಿಷೇಕ, ಮಹೋತ್ಸವದೊಂದಿಗೆ ಪೂಜಾ ಕಾರ್ಯಕ್ರಮ ಸಂಪನ್ನಗೊಂಡಿತು.

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಶ್ರದ್ಧಾ ಅಮಿತ್‌, ಮಾನ್ಯಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here