Home ಧಾರ್ಮಿಕ ಸುದ್ದಿ ಕೊಕ್ಕಡ: ಮಾಯಿಲಕೋಟೆ ದೈವ ಸನ್ನಿಧಿದೈವದ ಗುಡಿಗಳ ಶಿಲಾನ್ಯಾಸ

ಕೊಕ್ಕಡ: ಮಾಯಿಲಕೋಟೆ ದೈವ ಸನ್ನಿಧಿದೈವದ ಗುಡಿಗಳ ಶಿಲಾನ್ಯಾಸ

1213
0
SHARE

ಕೊಕ್ಕಡ : ಕೊಕ್ಕಡ ಗ್ರಾಮದ ಮಾಯಿಲಕೋಟೆ ದೈವ ಸನ್ನಿಧಿಯಲ್ಲಿ ನೂತನ ವಾಗಿ ನಿರ್ಮಿಸಲಿರುವ ದೈವದ ಗುಡಿಗಳ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್‌ ಪೂಂಜ ಶಿಲಾನ್ಯಾಸ ನೆರವೇರಿಸಿದರು. ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ರಾವ್‌ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಯಾಗಿ ಶ್ರೀ ಕ್ಷೇ.ಧ.ಗ್ರಾ. ಯೋಜನೆ, ಸಮುದಾಯ ಅಭಿವೃದ್ಧಿ ವಿಭಾಗ ಯೋಜನಾಧಿಕಾರಿ ಜಯರಾಮ ನೆಲ್ಲಿತ್ತಾಯ, ಕಾವು- ಕೌಕ್ರಾಡಿ ತ್ರಿಗುಣಾತ್ಮಿಕ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಕುಶಾಲಪ್ಪ ಗೌಡ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ಕೊಕ್ಕಡ ಕ್ಷೇತ್ರ ತಾ.ಪಂ. ಸದಸ್ಯ ಲಕ್ಷಿ ್ಮೕ ನಾರಾಯಣ, ಕೊಕ್ಕಡ ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷ ತುಕ್ರಪ್ಪ ಶೆಟ್ಟಿ, ಉಪ್ಪಿನಂಗಡಿ ಕ್ಷೇತ್ರ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ರೆಖ್ಯಾ ಗುಡ್ರಾ ಮಲ್ಲೇಶ್ವರ ದೇವಸ್ಥಾನದ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ, ಪುತ್ತೂರು ಎ.ಪಿ.ಎಂ.ಸಿ. ಸದಸ್ಯ ಬಾಲಕೃಷ್ಣ ಬಾಣಜಾಲು, ಹತ್ಯಡ್ಕ ಸೇವಾ ಸಹಕಾರಿ ಸಂಘ ಅಧ್ಯಕ್ಷ ಜಗನ್ನಾಥ ಗೌಡ, ದೇವಪಾಲ ಅಜ್ರಿ ಉಳಿಯಬೀಡು ಪಟ್ರಮೆ, ರವಿಪ್ರಸಾದ್‌ ಶೆಟ್ಟಿ ರಾಮನಗರ ಬಲ್ಯ, ಚಂದ್ರಶೇಖರ ಶೆಟ್ಟಿ ಸ್ವಾಮಿಕೃಪಾ ಪೆರಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here