Home ಧಾರ್ಮಿಕ ಸುದ್ದಿ ಒಳಲಂಕೆ ವೆಂಕಟರಮಣ ದೇವಸ್ಥಾನದ ಪ್ರಮುಖರಿಂದ ಧರ್ಮಸ್ಥಳ ಭೇಟಿ

ಒಳಲಂಕೆ ವೆಂಕಟರಮಣ ದೇವಸ್ಥಾನದ ಪ್ರಮುಖರಿಂದ ಧರ್ಮಸ್ಥಳ ಭೇಟಿ

1342
0
SHARE

ಮೂಲ್ಕಿ: ಒಳಲಂಕೆ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಪುನರ್‌ ಪ್ರತಿಷ್ಠಾ ಸಂಕಲ್ಪದ ಪೂರ್ವಭಾವಿಯಾಗಿ ದೇಗುಲದ ಆಡಳಿತ ಮಂಡಳಿ ಮತ್ತು ಅರ್ಚಕ ವೃಂದ ಹಾಗೂ ಊರಿನ ಭಜಕ ಜನರು ಸೇರಿ ಸುಮಾರು 300ಕ್ಕೂ ಮಿಕ್ಕಿದ ಜನರು ಶ್ರೀ ಕೇÒತ್ರ ಧರ್ಮಸ್ಥಳಕ್ಕೆ ಭೇಟಿಯಿತ್ತು ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕೇÒತ್ರದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಈ ತಂಡ ತಾವು ಸಂಗ್ರಹಿಸಿದ ಕಾಣಿಕೆಯನ್ನು ಶ್ರೀ ವಿರೇಂದ್ರ ಹೆಗ್ಗಡೆಯವರ ಮೂಲಕ ಕೇÒತ್ರಕ್ಕೆ ಸಲ್ಲಿಸಿದರು.

ಹೆಗ್ಗಡೆಯವರು ಮೂಲ್ಕಿ ದೇಗುಲದ ಭಕ್ತ ಜನರ ಜತೆಗೆ ಸಂವಾದ ನಡೆಸಿ ಮುಂದೆ ನಡೆಯಲಿರುವ ಜೀರ್ಣೋದ್ಧಾರ ಮತ್ತು ಪುನರ್‌ ಪ್ರತಿಷ್ಠಾ ಯೋಜನೆಯ ಬಗ್ಗೆ ಸಲಹೆ ಮತ್ತು ಸೂಚನೆಯಿತ್ತರು.

LEAVE A REPLY

Please enter your comment!
Please enter your name here