Home ಧಾರ್ಮಿಕ ಸುದ್ದಿ ಹೊಸ ವರ್ಷದ ಸಂಭ್ರಮ : ಧರ್ಮಸ್ಥಳ, ಕೊಲ್ಲೂರು ಸಹಿತ ಕರಾವಳಿ ದೇಗುಲಗಳಲ್ಲಿ ಜನಸಂದಣಿ

ಹೊಸ ವರ್ಷದ ಸಂಭ್ರಮ : ಧರ್ಮಸ್ಥಳ, ಕೊಲ್ಲೂರು ಸಹಿತ ಕರಾವಳಿ ದೇಗುಲಗಳಲ್ಲಿ ಜನಸಂದಣಿ

1036
0
SHARE

ಬೆಳ್ತಂಗಡಿ: ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತರ ದಟ್ಟಣೆ ಬುಧವಾರವೂ ಮುಂದುವರಿದಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹೊಸ ವರ್ಷ ಶುಭಾರಂಭದ ದಿನ 50 ಸಾವಿರಕ್ಕೂ ಮಿಕ್ಕಿ ಭಕ್ತರು ದೇವರ ದರ್ಶನ ಪಡೆದು ವಿಶೇಷ ಸೇವೆ ಸಲ್ಲಿಸಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ 15 ಸಾವಿರ ಮಂದಿ ದೇವಿಯ ದರ್ಶನ ಪಡೆದರು.

ಹಲವು ಮಂದಿ ಪಾದಯಾತ್ರೆ ಸೇರಿದಂತೆ ಸೈಕಲ್‌ ಮೂಲಕವೂ ಧರ್ಮಸ್ಥಳಕ್ಕೆ ಬಂದು ಸೇವೆ ಸಲ್ಲಿಸಿದ್ದಾರೆ. ನೂರಾರು ಮಂದಿ ಮುಡಿ ಅರ್ಪಿಸಿ (ತಲೆಕೂದಲು ತೆಗೆಸಿ) ನೇತ್ರಾವತಿ ಪುಣ್ಯಸ್ನಾನಗೈದರು. ದೇವರದರ್ಶನದ ಬಳಿಕ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದರು.
ಮಂಜೂಷಾ ವಸ್ತು ಸಂಗ್ರಹಾಲಯ, ಕಾರ್‌ ಮ್ಯೂಸಿಯಂ, ಮಂಜುನಾಥೇಶ್ವರ ಸಂಸ್ಕೃತಿ  ಸಂಶೋಧನಾ ಪ್ರತಿಷ್ಠಾನ, ಬಾಹುಬಲಿ ಸ್ವಾಮಿ, ಅಣ್ಣಪ್ಪ ಬೆಟ್ಟ ವೀಕ್ಷಿಸಿದರು. ಬೆಂಗಳೂರಿನ ಭಕ್ತರಿಂದ ಪುಷ್ಪಾಲಂಕಾರ ಗಮನ ಸೆಳೆಯಿತು.
ಉಡುಪಿ ಶ್ರೀಕೃಷ್ಣ ಮಠ ಸೇರಿದಂತೆ ಕರಾವಳಿಯ ಇತರ ದೇಗುಲಗಳಲ್ಲಿಯೂ ಭಕ್ತರ ದಟ್ಟಣೆ ಕಂಡುಬಂದಿತು.

LEAVE A REPLY

Please enter your comment!
Please enter your name here