Home ಧಾರ್ಮಿಕ ಸುದ್ದಿ ಧರ್ಮಸ್ಥಳ ಮಹಾಮಸ್ತಕಾಭಿಷೇಕಕ್ಕೆ ಹೊರೆಕಾಣಿಕೆ

ಧರ್ಮಸ್ಥಳ ಮಹಾಮಸ್ತಕಾಭಿಷೇಕಕ್ಕೆ ಹೊರೆಕಾಣಿಕೆ

1857
0
SHARE

ಮೂಡುಬಿದಿರೆ, ಫೆ. 8: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಭಗವಾನ್‌ ಬಾಹುಬಲಿಯ ನಾಲ್ಕನೇ ಮಹಾಮಸ್ತಕಾ ಭಿಷೇಕಕ್ಕೆ ಮೂಡುಬಿದಿರೆಯ ಭಕ್ತರು ಸಮರ್ಪಿಸಿರುವ 1,000 ಚೀಲ ಅಕ್ಕಿ, ಬೆಲ್ಲ, ತೆಂಗಿನಕಾಯಿಗಳ ಹೊರೆಕಾಣಿಕೆಯನ್ನು ಶುಕ್ರವಾರ ಧರ್ಮಸ್ಥಳಕ್ಕೆ ಒಪ್ಪಿಸಲಾಯಿತು.

ಮೂಡುಬಿದಿರೆ ಶ್ರೀ ಜೈನಮಠಾಧೀಶ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಸ್ವಾಮೀಜಿ, ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ, ಕೆ.ಅಭಯಚಂದ್ರ ಜೈನ್‌, ಜೈನ ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್‌ಕುಮಾರ್‌, ಆನಡ್ಕ ದಿನೇಶ್‌ಕುಮಾರ್‌, ಚೌಟರ ಅರಮನೆ ಕುಲದೀಪ ಎಂ., ಪ್ರಮುಖರಾದ ರಾಜವರ್ಮ ಬೈಲಂಗಡಿ, ಎಂಸಿಎಸ್‌ ಬ್ಯಾಂಕ್‌ ಸಿಇಒ ಚಂದ್ರಶೇಖರ ಎಂ., ಪುರಸಭಾ ಸದಸ್ಯ ಎಂ. ಬಾಹುಬಲಿ ಪ್ರಸಾದ್‌, ಶೈಲೇಂದ್ರಕುಮಾರ್‌, ಜೈನ್‌ಮಿಲನ್‌ ಅಧ್ಯಕ್ಷೆ ಶ್ವೇತಾ ಕೆ. ಮೊದಲಾದವರಿದ್ದರು. ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ಸಂಚಾಲಕ ಹರ್ಷೇಂದ್ರಕುಮಾರ್‌ ಮತ್ತಿತರರು ಹೊರೆಕಾಣಿಕೆಯನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here