Home ಧಾರ್ಮಿಕ ಸುದ್ದಿ ಧರ್ಮಸ್ಥಳ: ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ 35ನೇ ವರ್ಷದ ಶ್ರೀ ಗಣೇಶೋತ್ಸವ

ಧರ್ಮಸ್ಥಳ: ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ 35ನೇ ವರ್ಷದ ಶ್ರೀ ಗಣೇಶೋತ್ಸವ

827
0
SHARE

ಕೆಎಸ್‌ಆರ್‌ಟಿಸಿ ಇನ್ನಷ್ಟು ಜನಸ್ನೇಹಿಯಾಗಲಿ: ಡಾ| ಹೆಗ್ಗಡೆ
ಬೆಳ್ತಂಗಡಿ
: ಸಾರಿಗೆ ಸಂಸ್ಥೆಯ ಸಿಬಂದಿ ಪ್ರಾಮಾಣಿಕರಾಗಿ ದುಡಿದು ಭಕ್ತರನ್ನು ಕ್ಷೇತ್ರಕ್ಕೆ ಕರೆತಂದು ಸುರಕ್ಷಿತವಾಗಿ ಮರಳಿಸುವ ಪುಣ್ಯಕಾರ್ಯದಲ್ಲಿ ಸ್ವಾಮಿಯ ಸೇವೆ ಮಾಡುತ್ತಿದ್ದಾರೆ. ಸಂಸ್ಥೆಯು ಪ್ರಯಾಣಿಕರಿಗೆ ಹೆಚ್ಚಿನ ಅನು ಕೂಲತೆ ಕಲ್ಪಿಸಿ ಜನಸ್ನೇಹಿಯಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಧರ್ಮಸ್ಥಳದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ವತಿಯಿಂದ ನಡೆದ 35ನೇ ವರ್ಷದ ಶ್ರೀ ಗಣೇಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುತ್ತೂರು ವಿಭಾಗದ ಕೆಎಸ್‌ಆರ್‌ಟಿಸಿ ವಿಭಾಗಾಧಿಕಾರಿ ನಾಗರಾಜ ಶಿರಾಲಿ ಮಾತನಾಡಿ, ಧರ್ಮಸ್ಥಳದ ಕೆಎಸ್‌ಆರ್‌ಟಿಸಿ ಡಿಪೋಗೆ 30 ಹೊಸ ವಾಹನ ಗಳನ್ನು ನೀಡಲಾಗಿದೆ. ಶಿರಾಡಿ ಘಾಟಿ ರಸ್ತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಜೀವನಾಡಿ. ಶಿರಾಡಿ ಘಾಟಿ ರಸ್ತೆ ಸಂಚಾರ ಅನಾನುಕೂಲತೆಯಿಂದ ನಿಗಮಕ್ಕೆ 1.5 ಕೋ.ರೂ.ನಿಂದ 2 ಕೋ.ರೂ.ನಷ್ಟು ನಷ್ಟ ವುಂಟಾಗಿದೆ. ಕೇಂದ್ರ ಕಚೇರಿಯಿಂದ 80 ಲಕ್ಷ ರೂ. ವೆಚ್ಚದಲ್ಲಿ ಹಳೆ ಕ್ವಾರ್ಟರ್ಸ್‌ ಗಳ ನವೀಕರಣಗೊಳಿಸಲಾಗುತ್ತಿದೆ. 1.5 ಕೋ. ರೂ. ವೆಚ್ಚದಲ್ಲಿ 12 ಹೊಸ ಕ್ವಾರ್ಟರ್ಸ್‌ ಗಳ ಕಾಮಗಾರಿಯನ್ನು 2-3 ತಿಂಗಳಲ್ಲಿ ಪ್ರಾರಂಭಿಸಲಾಗುವುದು. ವಿದ್ಯಾರ್ಥಿ ಗಳಿಗೆ ಬಸ್‌ಪಾಸ್‌, ಶಾಲಾ ಅವಧಿಯಲ್ಲಿ ಹೆಚ್ಚುವರಿ ಬಸ್‌ ಒದಗಿಸಿ ಪ್ರಥಮ ಪ್ರಾಶಸ್ಥ್ಯ ನೀಡಲಾಗುವುದು ಎಂದರು.

ಸಮ್ಮಾನ ವಿಧಾನ ಪರಿಷತ್‌ ಸದಸ್ಯ ಹರೀಶ್‌ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. 2017-18ನೇ ಸಾಲಿನ ಎಸೆಸೆಲ್ಸಿ, ಪಿಯುಸಿ, ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ನೌಕರರ ಮಕ್ಕಳಿಗೆ, ನಿವೃತ್ತಿ ಹೊಂದಿದ ಸಿಬಂದಿಯನ್ನು ಪುರಸ್ಕರಿಸಲಾಯಿತು. ಕುಶಲಕರ್ಮಿಗಳಾದ ಮನೋಹರ್‌ ಎನ್‌.ಎಸ್‌., ದಯಾನಂದ, ನಾಗೇಶ್‌, ಸದಾಶಿವ ಇಂಗಲೆ ಅವರ ತಂಡವು ಮಳೆಗಾಲದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಹಾಗೂ ಅತೀ ಕಡಿಮೆ ವೆಚ್ಚದಲ್ಲಿ ಹಳೆ ಸಾಮಗ್ರಿಗಳನ್ನು ಬಳಸಿ ಸುಸಜ್ಜಿತ 4 ಬ್ರಶ್‌ಗಳನ್ನೊಳಗೊಂಡ ವಿನೂತನ ಶೈಲಿಯ ಸ್ವಯಂ ಚಾಲಿತ ಬಸ್ಸು ತೊಳೆಯುವ ಯಂತ್ರವನ್ನು ಅಳವಡಿಸಿರುತ್ತಾರೆ. ಹಳೆಯ ಸಾಮಗ್ರಿಗಳು, ಕಂಪ್ಯೂಟರ್‌ನ ಯುಪಿಎಸ್‌ ಕಾಯಿಲ್‌ ತೆಗೆದು 500 ರೂ. ವೆಚ್ಚದಲ್ಲಿ ವೆಲ್ಡಿಂಗ್‌ ಮೆಶಿನ್‌ ತಯಾರಿಸಿ ರುತ್ತಾರೆ. ಹಳೆ ಸಾಮಗ್ರಿಗಳಿಂದ ಬೇರಿಂಗ್‌ಗೆ ಗ್ರೀಸಿಂಗ್‌ ಮಾಡುವ ಯಂತ್ರ, ಬಾಡಿ ಶೀಟ್‌ ಬೆಂಡ್‌ ಮಾಡುವ ಯಂತ್ರ ತಯಾರಿಸಿ ತಮ್ಮ ಕೌಶಲ ಮೆರೆದ ನಾಲ್ವರನ್ನು ಸಮ್ಮಾನಿಸಲಾಯಿತು.

ಪುತ್ತೂರು ವಿಭಾಗದ ಸಂಚಾಲನಾಧಿಕಾರಿ ಮುರಲೀಧರ ಆಚಾರ್‌, ಅಂಕಿ ಅಂಶ ಅಧಿಕಾರಿ ಜಯಕರ ಶೆಟ್ಟಿ ಉಪಸ್ಥಿತರಿದ್ದರು. ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಶಿವರಾಮ ನಾಯ್ಕ ಸ್ವಾಗತಿಸಿ, ಸುಬ್ರಹ್ಮಣ್ಯ ಪ್ರಕಾಶ್‌ ಭಟ್‌ ವಂದಿಸಿದರು. ವೆಂಕಟ್ರಮಣ ಶೆಟ್ಟಿ ನಿರೂಪಿಸಿದರು.

LEAVE A REPLY

Please enter your comment!
Please enter your name here