Home ಧಾರ್ಮಿಕ ಸುದ್ದಿ ಧರ್ಮ ಸಂಸದ್‌: ಪೂರ್ವಭಾವಿ ಸಭೆ

ಧರ್ಮ ಸಂಸದ್‌: ಪೂರ್ವಭಾವಿ ಸಭೆ

1253
0
SHARE

ಬೆಳ್ತಂಗಡಿ: ಕನ್ಯಾಡಿ ಶ್ರೀರಾಮ ಕ್ಷೇತ್ರದ ವತಿಯಿಂದ ಸೆ. 3ರಂದು ಜರಗುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಸದ್ಗುರು ಪಟ್ಟಾಭಿಷೇಕದ ದಶಮಾನೋತ್ಸವ, ಧರ್ಮ ಸಂಸದ್‌ನ ಪೂರ್ವಭಾವಿ ಸಭೆ ಸೋಮವಾರ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇ.ಸಂ. ವತಿಯಿಂದ ಸಂಘದ ಸಭಾಭವನದಲ್ಲಿ ನಡೆಯಿತು.

ಧರ್ಮ ಸಂಸದ್‌ನ ಜಿಲ್ಲಾ ಉಪಾಧ್ಯಕ್ಷ ಪೀತಾಂಬರ ಹೇರಾಜೆ ಮಾತನಾಡಿದರು. ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಅವರು ಧರ್ಮ ಸಂಸದ್‌ನ ಉದ್ದೇಶಗಳ ಕುರಿತು ವಿವರಿಸಿದರು. ಸಭೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಪ್ರಮುಖರಾದ ವಸಂತ ಸಾಲ್ಯಾನ್‌, ಮೋಹನ್‌ ಉಜ್ಜೋಡಿ, ಸಂಪತ್‌ ಸುವರ್ಣ, ಪಿ.ಕೆ. ರಾಜು ಪೂಜಾರಿ, ಜಯರಾಮ ಬಂಗೇರ, ಯೋಗೀಶ್‌ ಕುಮಾರ್‌, ಸಂತೋಷ್‌ಕುಮಾರ್‌, ಸುಜಿತಾ ವಿ. ಬಂಗೇರ, ಪ್ರಶಾಂತ್‌ ಮಚ್ಚಿನ, ರಾಜೇಶ್‌ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ಸ್ವಾಗತಿಸಿದರು.

ದೇಶದ ವಿವಿಧ ಭಾಗಗಳ ಸಂತರು
ಸಭೆಯಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಲೋಕ ಕಲ್ಯಾಣ ಹಾಗೂ ಧರ್ಮ ರಕ್ಷಣೆಗಾಗಿ ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಲೋಕ ಕಲ್ಯಾಣ ಮಂಚ್‌ ಸ್ಥಾಪನೆಯ ಉದ್ದೇಶದಿಂದ ಧರ್ಮಸಂಸದ್‌ ಆಯೋಜನೆಗೊಳ್ಳುತ್ತಿದೆ. ದೇಶದ ವಿವಿಧ ಭಾಗಗಳ ಸಂತರು ಇದರಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲಪಕ್ಷಗಳ ನಾಯಕರು
ಕೂಡ ಭಾಗವಹಿಸಲಿದ್ದಾರೆ. ಎಲ್ಲರ ಸಹಕಾರದಿಂದ ಇದು ಯಶಸ್ವಿಯಾಗಲಿದೆ ಎಂದರು.

LEAVE A REPLY

Please enter your comment!
Please enter your name here