Home ಧಾರ್ಮಿಕ ಸುದ್ದಿ ದೇಶದ ಇತಿಹಾಸ-ಪರಂಪರೆ ಪಠ್ಯದಲ್ಲಿರಲಿ

ದೇಶದ ಇತಿಹಾಸ-ಪರಂಪರೆ ಪಠ್ಯದಲ್ಲಿರಲಿ

ಧರ್ಮಸಂಸದ್‌ ಪೂರ್ವಭಾವಿ ಸಭೆಯಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

1269
0
SHARE

ಕಾರ್ಕಳ: ರಾಮಾಯಣ, ಮಹಾಭಾರತ, ಭಗವದ್ಗೀತೆಯ ಸಂದೇಶಗಳು ಶಿಕ್ಷಣದಲ್ಲಿ ದೊರೆತಾಗ ದೇಶ ರಾಮರಾಜ್ಯವಾಗಲಿದೆ. ಭಾರತೀಯ ಇತಿಹಾಸ – ಪರಂಪರೆ ಶಿಕ್ಷಣ ವ್ಯವಸ್ಥೆಯಲ್ಲಿರಬೇಕೆಂದು ಆಗ್ರಹಿಸುವ ನಿಟ್ಟಿನಲ್ಲಿ ಧರ್ಮಸಂಸದ್‌ ಆಯೋಜಿಸಲಾಗುತ್ತಿದೆ ಎಂದು ಶ್ರೀರಾಮ ಕ್ಷೇತ್ರ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್‌ ಆಶ್ರಯದಲ್ಲಿ ಸೆ. 3ರಂದು ನಡೆಯಲಿರುವ ಸ್ವಾಮೀಜಿ ಅವರ ಪಟ್ಟಾಭಿಷೇಕ ಹಾಗೂ ಧರ್ಮಸಂಸದ್‌ ಕಾರ್ಯಕ್ರಮದ ಕುರಿತು ರವಿವಾರ ಶಾರದಾ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಗತ್ತಿಗೆ ಆಧ್ಯಾತ್ಮಿಕ ಬೆಳಕನ್ನು ನೀಡಿದ ದೇಶ ಭಾರತ. ಹೀಗಾಗಿ ಈ ನೆಲದ ಇತಿಹಾಸವನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಸ್ತುತ ಇರುವ ಮೆಕಾಲೆ ಪ್ರಣೀತ ಶಿಕ್ಷಣ ಪದ್ಧತಿಯಲ್ಲಿ ನಕಾರಾತ್ಮಕ ಅಂಶಗಳೇ ಇದ್ದು, ಅದರಿಂದ ನೆಮ್ಮದಿ ಪಡೆಯಲು ಸಾಧ್ಯವಿಲ್ಲ. ಭಗವದ್ಗೀತೆ, ಉಪನಿಷತ್‌ ಗಳಲ್ಲಿ ಜಗತ್ತಿಗೆ ಬೇಕಾಗುವ ತಣ್ತೀಗಳಿವೆ. ನಲಂದಾ, ಕಾಶಿ, ತಕ್ಷಶಿಲಾದಂತಹ ಗುರುಕುಲಗಳಿಂದ ಲುಪ್ತವಾದ ಶಿಕ್ಷಣ ಪದ್ಧತಿಯನ್ನು ಮತ್ತೆ ಜಾರಿಗೊಳಿಸುವಂತಾಗಬೇಕು ಎಂದರು.

ಶಾಸಕ ವಿ. ಸುನಿಲ್‌ ಕುಮಾರ್‌ ಮಾತನಾಡಿ, ದರ್ಮಸಂಸದ್‌ನ ಯಶಸ್ಸಿಗೆ ಪೂರ್ಣ ಸಹಕಾರ ನೀಲಾಗುವುದು ಎಂದರು. ನ್ಯಾಯವಾದಿ ಸುನಿಲ್‌ ಕುಮಾರ್‌ ಶೆಟ್ಟಿ, ತುಕಾರಾಮ್‌, ಮಹಾಬಲ ಆಚಾರ್ಯ, ರತ್ನಾಕರ ಆಚಾರ್ಯ, ದಯಾನಂದ ಹೆಗ್ಡೆ, ಶಿವಪ್ರಸಾದ್‌, ಸತ್ಯನಾರಾಯಣ ಹೆಬ್ಟಾರ್‌, ಮೋಹನ್‌ ಉಜ್ಜೋಡಿ ಉಪಸ್ಥಿತರಿದ್ದರು. ನವೀನ್‌ ನಾಯಕ್‌ ಕಾರ್ಕಳ ಸ್ವಾಗತಿಸಿದರು.

LEAVE A REPLY

Please enter your comment!
Please enter your name here