Home ಧಾರ್ಮಿಕ ಸುದ್ದಿ ಭಕ್ತರೆಲ್ಲ ಒಂದೇ ಮನಸ್ಸಿನಿಂದ ದುಡಿಯೋಣ: ದುಗ್ಗಣ್ಣ ಸಾವಂತರು

ಭಕ್ತರೆಲ್ಲ ಒಂದೇ ಮನಸ್ಸಿನಿಂದ ದುಡಿಯೋಣ: ದುಗ್ಗಣ್ಣ ಸಾವಂತರು

1516
0
SHARE
ಬಪ್ಪನಾಡು ದೇವಸ್ಥಾನ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಮೂಲ್ಕಿ : ತಾಯಿಯ ಸೇವೆಯಲ್ಲಿ ಸೀಮೆಯ ಭಕ್ತರೆಲ್ಲ ಒಂದೇ ಮನಸ್ಸಿನಿಂದ ದುಡಿಯುವ ಮೂಲಕ ಮೂಲ್ಕಿಯ ಒಂಬತ್ತು ಮಾಗಣೆಯ ಒಡತಿ, ದುರ್ಗಾ ಮಾತೆಯ ಪ್ರೀತಿಗೆ ಪಾತ್ರರಾಗೋಣ ಎಂದು ಮೂಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತರು ಹೇಳಿದರು.

ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ರವಿವಾರ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಚಪ್ಪರ ಮುಹೂರ್ತದ ಅನಂತರ ನಡೆದ 32 ಗ್ರಾಮಗಳ ಮೂಲ್ಕಿ ಸೀಮೆಯ ಸಭೆಯಲ್ಲಿ ಅವರು ಮಾತನಾಡಿದರು.

ಬ್ರಹ್ಮಕಲಶೋತ್ಸವ ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನವು ಅಭಿವೃದ್ಧಿಯಿಂದ ಬೆಳಗುವ ಜತೆಗೆ ಊರಿನ ಸಮಗ್ರ ಚಿತ್ರಣ ಬದಲಾಗುತ್ತದೆ. ಹನ್ನೆರಡು ವರ್ಷಗಳ ಅನಂತರ ಮತ್ತೆ ನಡೆಯುತ್ತಿರುವ ಈ ಮಹೋತ್ಸವದಲ್ಲಿ ಸೀಮೆಯೊಳಗಿನ ಪ್ರತಿಯೊಂದು ಮನೆಯವರು ಹಾಗೂ ಸಮಸ್ತ ದೇಗುಲದ ಭಕ್ತ ಸಮುದಾಯ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸಮಿತಿಯ ಅಶೋಕ್‌ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಿತಿಯ ಅತುಲ್‌ ಕುಡ್ವಾ, ಆಡಳಿತ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪಿ. ಜಯಮ್ಮಾ, ಕಾರ್ಯಕ್ರಮದ ಅತಿಥಿಗಳಾದ ಉದ್ಯಮಿ ಪಂಜದ ಗುತ್ತು ಶಾಂತಾರಾಮ ಶೆಟ್ಟಿ, ದೆಪ್ಪುಣಿಗುತ್ತು ಜಯರಾಮ ಶೆಟ್ಟಿ, ಸಸಿಹಿತ್ಲು ಭಗವತಿ ದೇವಸ್ಥಾನದ ಅರ್ಚಕ ಮತ್ತು ಆನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ,ಉದ್ಯಮಿ ಕುಲ್ಯಾಡಿ ಉದಯ ಪೈ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸುನೀಲ್‌ ಆಳ್ವ ಅವರು ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಕೆ. ಅಭಯಚಂದ್ರ ಜೈನ್‌, ತಂತ್ರಿಗಳಾದ ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ಕೃಷ್ಣದಾಸ್‌ ಭಟ್‌, ಮಾಜಿ ಆಡಳಿತ ಮೊಕ್ತೇಸರ ಹರಿಕೃಷ್ಣ ಪುನರೂರು, ಸಮಿತಿಯ ಸೂರ್ಯಕುಮಾರ್‌, ಎಚ್‌.ವಿ. ಕೋಟ್ಯಾನ್‌, ಬೂಬ ಶೆಟ್ಟಿಗಾರ್‌, ಚೆನ್ನಪ್ಪ ಬಿ.ಎಸ್‌., ದೊಡ್ಡಣ್ಣ ಮೊಲಿ, ಕೊಲಾ°ಡು ಗುತ್ತು ರಾಮಚಂದ್ರ ನಾಯಕ್‌, ಬಾಳದ ಗುತ್ತು ಕರುಣಾಕರ ಶೆಟ್ಟಿ, ಉದಯ ಟಿ. ಶೆಟ್ಟಿ, ಹರೀಶ್‌ ಪುತ್ರನ್‌, ಅದಿಧನ್‌, ಸತೀಶ್‌ ಭಂಡಾರಿ, ಕೃಷ್ಣ ಕೆ. ಶೆಟ್ಟಿ, ಗುರುವಪ್ಪ ಕೋಟ್ಯಾನ್‌, ಹರ್ಷರಾಜ್‌ ಶೆಟ್ಟಿ, ಅಶೋಕ್‌ ಶೆಟ್ಟಿ, ಕಿಶೋರ್‌ ಎನ್‌. ಶೆಟ್ಟಿ, ರಾಜೇಶ್‌ ಶೆಟ್ಟಿ, ನವೀನ್‌ ಶೆಟ್ಟಿ, ನಾಗೇಶ್‌ ಎ. ಬಪ್ಪನಾಡು, ಗಂಗಾಧರ ಶೆಟ್ಟಿ, ಎಂ. ಬಾಲಕೃಷ್ಣ ಹೆಗ್ಡೆ, ಶಶೀಂದ್ರ ಸಾಲ್ಯಾನ್‌, ರಂಗನಾಥ ಶೆಟ್ಟಿ, ಉದಯ ಶೆಟ್ಟಿ, ಜೀವನ್‌ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧನಂಜಯ ಕೋಟ್ಯಾನ್‌ ಮಟ್ಟು, ದಾನಿ ರೇಶ್ಮಾ ರವಿರಾಜ್‌ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here