Home ಧಾರ್ಮಿಕ ಸುದ್ದಿ ಭಕ್ತಜನಸಾಗರದಲ್ಲಿ ಮಿಂದೆದ್ದ ಪುಳಿನಾಪುರ

ಭಕ್ತಜನಸಾಗರದಲ್ಲಿ ಮಿಂದೆದ್ದ ಪುಳಿನಾಪುರ

1531
0
SHARE

ಪೊಳಲಿ: ಜಗನ್ಮಾತೆ ಪೊಳಲಿ ಶ್ರೀ ರಾಜರಾಜೇಶ್ವರಿಯ ಸನ್ನಿಧಿಯು ಬುಧವಾರ ಜನಸಾಗರ ದಿಂದ ತುಂಬಿ ತುಳುಕಿತ್ತು. ಎತ್ತ ನೋಡಿದರೂ ಬರೀ ಭಕ್ತರ ದಂಡೇ ಕಂಡುಬರುತ್ತಿತ್ತು. ನೆರೆದ ಭಕ್ತರನ್ನು ನಿಯಂತ್ರಣ ಮಾಡುವುದಕ್ಕಾಗಿ ಸ್ವಯಂ ಸೇವಕರು ಹರಸಾಹಸವನ್ನೇ ಪಡು ತ್ತಿದ್ದರು. ಆದರೆ ಯಾರಿಗೂ ತೊಂದರೆಯಾಗದ ರೀತಿ ಯಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡ ಲಾಗಿದ್ದು, ದೇವರ ದರ್ಶನ ಸಹಿತ ಶಾಂತಚಿತ್ತ ರಾಗಿ ತಮ್ಮ ಆರಾಧ್ಯಮೂರ್ತಿಯ ಐತಿಹಾಸಿಕ ಬ್ರಹ್ಮಕಲಶಾಭಿಷೇಕ ವನ್ನು ಕಣ್ತುಂಬಿಕೊಂಡರು.

ಬೆಳಕು ಹರಿಯುವ ಮುನ್ನವೇ ತಾಯಿಯ ಪುಣ್ಯ ಕಾರ್ಯ ಆರಂಭ ಗೊಂಡಿದ್ದು, ಆ ಹೊತ್ತಿಗಾಗಲೇ ಸಾವಿರಾರು ಸಂಖ್ಯೆಯ ಭಕ್ತರು ಸೇರಿದ್ದರು. ಮಧ್ಯಾಹ್ನ ಆಗುತ್ತಲೇ ಭಕ್ತರ ಸಂಖ್ಯೆ ಲಕ್ಷ ದಾಟಿತ್ತು. ಆಗಮಿ ಸಿದ ಭಕ್ತರ ಹಸಿವನ್ನು ನೀಗಿ ಸುವ ದೃಷ್ಟಿಯಿಂದ ಪ್ರಸಾದ ರೂಪ ವಾಗಿ ಬೆಳಗ್ಗೆ-ಸಂಜೆ ಉಪಾ  ಹಾರ, ಮಧ್ಯಾಹ್ನ- ರಾತ್ರಿ ಅನ್ನ ಪ್ರಸಾದ ನೀಡಲಾ ಯಿತು. ಜತೆಗೆ ನಿರಂತರ  ವಾಗಿ ಕೆಎಂಎಫ್ನವರ ಮಜ್ಜಿಗೆ, ಬಿರಿಂಡಾ ಜ್ಯೂಸ್‌ ವಿತರಿಸಲಾಯಿತು.

ಮಧ್ಯಾಹ್ನ 12ಕ್ಕೆ ತಂತ್ರಿ ವೇ| ಮೂ| ಪೊಳಲಿ ಸುಬ್ರಹ್ಮಣ್ಯ ತಂತ್ರಿ ಗಳ ನೇತೃತ್ವದಲ್ಲಿ ವೇ| ಮೂ| ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ ಅವರ ಮಾರ್ಗದರ್ಶನದಲ್ಲಿ ಪಲ್ಲಪೂಜೆ ನಡೆದ ಬಳಿಕ ಅನ್ನಪ್ರಸಾದ ವಿತರಣೆ ಆರಂಭಗೊಂಡಿತು. ಬಳಿಕ ಸಂಜೆ ವರೆಗೂ ನಿರಂತರವಾಗಿ ಅನ್ನಪ್ರಸಾದ ವಿತರಣೆಯಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಪರಮೇಶ್ವರೀ ವೇದಿಕೆ ಯಲ್ಲಿ ಬೆಳಗ್ಗೆ ಮಂಗಳವಾದ್ಯ, ಭಜನೆ ನಡೆಯಿತು. ಶ್ರೀ ರಾಜ ರಾಜೇಶ್ವರೀ ವೇದಿಕೆಯಲ್ಲಿ ಸಂಗೀತ, ನೃತ್ಯ, ಹಾಸ್ಯ, ಪಟ್ಲ ಸತೀಶ್‌ ಶೆಟ್ಟಿ, ಗಿರೀಶ್‌ ರೈ ಕಕ್ಕೆಪದವು ಹಾಗೂ ಸತ್ಯ ನಾರಾಯಣ ಪುಣಿಂಚಿ ತ್ತಾ ಯ ಅವ ರಿಂದ ಯಕ್ಷ-ಗಾನ-ವೈಭವ, ಶರತ್‌ ಶೆಟ್ಟಿ ಪಡುಪಳ್ಳಿ ಅವರಿಂದ ಹರಿಕಥೆ, ತಾಳಮದ್ದಳೆ, ಜಾನ ಪದ ಕಾರ್ಯ ಕ್ರಮ ಗಳು ಪ್ರದರ್ಶನಗೊಂಡವು.

ಬ್ರಹ್ಮಕಲಶಾಭಿಷೇಕದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ವಿಜಯನಾಥ್‌ ವಿಟuಲ ಶೆಟ್ಟಿ, ಐಕಳ ಹರೀಶ್‌ ಶೆಟ್ಟಿ, ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಅಶೋಕ್‌ ಡಿ.ಕೆ., ಸುಧೀರ್‌ ಶೆಟ್ಟಿ ಕಣ್ಣೂರು, ವಿಜಯಕುಮಾರ್‌ ಶೆಟ್ಟಿ, ದೀಪಕ್‌ ಪೂಜಾರಿ, ಸತ್ಯಜಿತ್‌ ಸುರತ್ಕಲ್‌, ಕ್ಯಾ| ಬ್ರಿಜೇಶ್‌ ಚೌಟ, ಡಾ| ಆಶಾಜ್ಯೋತಿ ರೈ, ಮುಂಬಯಿನ ನಿವೃತ್ತ ಪೊಲೀಸ್‌ ಅಧಿಕಾರಿ ಪ್ರಕಾಶ್‌ ಶೆಟ್ಟಿ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.

ಎಲ್‌ಇಡಿ ಮೂಲಕ ವೀಕ್ಷಣೆ
ತಾಯಿಯ ಬ್ರಹ್ಮಕಲಶಾಭಿಷೇಕವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯ ಭಕ್ತರು ಸೇರಿದ್ದ ಹಿನ್ನೆಲೆಯಲ್ಲಿ ಎಲ್ಲರಿಗೂ ನೇರವಾಗಿ ದೇವರನ್ನು ಕಾಣುವ ಅವಕಾಶವಿರಲಿಲ್ಲ. ಹೀಗಾಗಿ ಕ್ಷೇತ್ರದ ಅಲ್ಲಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗಿದ್ದು, ಭಕ್ತರು ಅದರ ಮೂಲಕ ಕಂಡು ಪುನೀತರಾದರು. ಕ್ಷೇತ್ರದ ರಾಜಬೀದಿ, ಉಗ್ರಾಣ, ಅನ್ನಛತ್ರ ಹೀಗೆ ಎಲ್ಲ ಭಾಗಗಳಲ್ಲೂ ಸೇರಿದ್ದ ಭಕ್ತರು ಬ್ರಹ್ಮಕಲಶಾಭಿಷೇಕ ಹಾಗೂ ಮಹಾಪೂಜೆಯ ವೈಭವವನ್ನು ವೀಕ್ಷಿಸಿದರು.

ಸಾವಿರಾರು ಸಂಖ್ಯೆಯ ಸ್ವಯಂಸೇವಕರು
ಬುಧವಾರವೂ 5 ಸಾವಿರಕ್ಕೂ ಅಧಿಕ ಸ್ವಯಂಸೇವಕರನ್ನು ಇಲ್ಲಿ ನಿಯೋಜಿಸಲಾಗಿತ್ತು. ಇನ್ನೂ ಕೆಲವರು ಸೇರಿಕೊಂಡು ಅದು ದುಪ್ಪಟ್ಟಾಯಿತು. ಪಾಕಶಾಲೆಯಲ್ಲಿ 500 ಮಂದಿ, ಪಾರ್ಕಿಂಗ್‌ನಲ್ಲಿ 300 ಮಂದಿ, ಸ್ವತ್ಛತೆಯಲ್ಲಿ 1,000 ಮಂದಿ, ರಕ್ಷಣೆಯಲ್ಲಿ 300 ಮಂದಿ, ಉಗ್ರಾಣದಲ್ಲಿ 150 ಮಂದಿ, ಅತಿಥಿ ಸತ್ಕಾರದಲ್ಲಿ 100 ಮಂದಿ, ಸ್ವಾಗತದಲ್ಲಿ 100 ಮಂದಿ, ಸೇವಾ ಕೌಂಟರ್‌ನಲ್ಲಿ 100 ಮಂದಿ ಹೀಗೆ ಸಾವಿರಾರು ಸಂಖ್ಯೆ ಸ್ವಯಂಸೇವಕರು ಶ್ರಮಿಸಿದರು.

ಕ್ಷೇತ್ರಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರ ವಾಹನಗಳನ್ನು ನಿಲ್ಲಿಸುವುದಕ್ಕೆ ಕ್ಷೇತ್ರ ಪರಿಸರದ ಗದ್ದೆಯ ಸುಮಾರು 22 ಎಕ್ರೆ ವಿಸ್ತೀರ್ಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಆಗಮನ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆಗಳಿದ್ದವು. ಜತೆಗೆ ವಿವಿಧ ವಿಭಾಗಗಳಲ್ಲಿ ವಾಹನಗಳು ನಿಲ್ಲಿಸಿದ ಪರಿಣಾಮ ಭಕ್ತರು ಯಾವುದೇ ತೊಂದರೆಯಿಲ್ಲದೆ ತಮ್ಮ ವಾಹನಗಳನ್ನು ಪತ್ತೆಹಚ್ಚಲು ನೆರವಾಯಿತು. ಸುಮಾರು 300ಕ್ಕೂ ಅಧಿಕ ಸ್ವಯಂಸೇವಕರು ಭಕ್ತರಿಗೆ ನಿರ್ದೇಶನ ನೀಡಿದರು.

LEAVE A REPLY

Please enter your comment!
Please enter your name here