Home ಧಾರ್ಮಿಕ ಸುದ್ದಿ ಭಕ್ತರ ಸಹಕಾರದಿಂದ ದೇಗುಲ ಶೀಘ್ರ: ಪದ್ಮಪ್ರಸಾದ್‌

ಭಕ್ತರ ಸಹಕಾರದಿಂದ ದೇಗುಲ ಶೀಘ್ರ: ಪದ್ಮಪ್ರಸಾದ್‌

1837
0
SHARE

ವೇಣೂರು: ವ್ರತ, ಉಪವಾಸಗಳಿಂದ ಮನಸ್ಸಿನಲ್ಲಿ ಏಕಾಗ್ರತೆ ಮೂಡುತ್ತದೆ ಮತ್ತು ದೇವರ ಮೇಲೆ ಭಯ, ಭಕ್ತಿ ನೆಲೆಸುತ್ತದೆ. ದೇವಾಲಯದ ಒಳಗೆ ದೇವರ ಭಕ್ತರಾಗಿ ಇರಬೇಕೇ ಹೊರತು ರಾಜಕೀಯ ಸಲ್ಲದು. ಭಕ್ತರ ಸಹಕಾರದಿಂದ ಶೀಘ್ರ ದೇವಾಲಯ ನಿರ್ಮಾಣ ಸಾಧ್ಯ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಪದ್ಮಪ್ರಸಾದ್‌ ಅಜಿಲ ಹೇಳಿದರು.

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಪೂರ್ವಭಾವಿಯಾಗಿ ಶ್ರೀ ಭದ್ರಕಾಳಿದೇವಿ ಗುಡಿಯ ಶಿಲಾನ್ಯಾಸ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೂಡುಬಿದಿರೆಯ ಉದ್ಯಮಿ ಶ್ರೀಪತಿ ಭಟ್‌ ಮಾತನಾಡಿ, ಮಾತೃಸ್ವರೂಪಿ ಭದ್ರಕಾಳಿ ದೇವಿಯ ಪ್ರತಿಷ್ಠಾಪನೆಯಿಂದ ದೇವಾಲಯದ ಜೀಣೋದ್ಧಾರ ಕಾರ್ಯ ನಿರ್ವಿಘ್ನವಾಗಿ ನೆರವೇರಲಿದೆ ಎಂದರು.

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಶ್ರೀಕ್ಷೇತ್ರ ಧ.ಗ್ರಾ.ಯೋ. ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿದರು. ಮೂಡುಬಿದಿರೆ ನಾರಾಯಣ ಸಾಮಿ ಲ್‌ನ ಭಾನುಮತಿ ಶೀನಪ್ಪ ಅವರು ರೂ. 1 ಲಕ್ಷ ಮೊತ್ತದ ಅನುದಾನ ನೀಡುವುದಾಗಿ ಘೋಷಿಸಿದರು.

ಉದ್ಯಮಿ ಸದಾನಂದ ಶೆಟ್ಟಿ, ಹರೀಂದ್ರ ಪೈ, ಅಳದಂಗಡಿಯ ಡಾ| ಪ್ರಶಾಂತ್‌ ದೇವಾಡಿಗ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಮುಕುಂದ ಸುವರ್ಣ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಸೋಮಯ್ಯ ಮೂಲ್ಯ ಹನೈನಡೆ ಉಪಸ್ಥಿತರಿದ್ದರು. ದಿ| ನಾರಾಯಣ ರಾವ್‌ ಖಂಡಿಗ ಇವರ ಮಕ್ಕಳು ದಾನವಾಗಿ ನೀಡಿದ ಸ್ಥಳದಲ್ಲಿ ಶ್ರೀ ದೇವಿ ಗುಡಿಯ ಶಿಲಾನ್ಯಾಸ ನೆರವೇರಿತು.

ತಂತ್ರಿ ಶ್ರೀಪಾದ ಪಾಂಗಾಣ್ಣಾಯರು ಶಿಲಾನ್ಯಾಸ ಪೂಜಾ ವಿಧಿವಿಧಾನ ನೆರವೇರಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪಿ. ಧರಣೇಂದ್ರ ಕುಮಾರ್‌ ಸ್ವಾಗತಿಸಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ಪ್ರಸ್ತಾವಿಸಿದರು. ಉಪನ್ಯಾಸಕ ಮಹಾವೀರ ಜೈನ್‌ ಮೂಡುಕೋಡಿ ಮತ್ತು ಸುಂದರ ಹೆಗ್ಡೆ ಬಿಇ ನಿರೂಪಿಸಿ, ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು ವಂದಿಸಿದರು. ಜೀರ್ಣೋದ್ಧಾರ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here