Home ಧಾರ್ಮಿಕ ಸುದ್ದಿ ದೇವಿನಗರ ಕ್ಷೇತ್ರದ ಪ್ರತಿಷ್ಠಾ ವರ್ಧಂತ್ಯುತ್ಸವ

ದೇವಿನಗರ ಕ್ಷೇತ್ರದ ಪ್ರತಿಷ್ಠಾ ವರ್ಧಂತ್ಯುತ್ಸವ

1889
0
SHARE

ಬಂಟ್ವಾಳ : ಮೂಡನಡುಗೋಡು ಗ್ರಾಮ ದೇವಿನಗರ ಶ್ರೀ ಜಗದಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರದ ಪ್ರತಿಷ್ಠಾ ವರ್ಧಂತ್ಯುತ್ಸವ ಪ್ರಯುಕ್ತ ಸಾಮೂಹಿಕ ಶ್ರೀ ದುರ್ಗಾಹೋಮ, ರಂಗಪೂಜೆ, ಭಜನ ಸಂಕೀರ್ತನೆ, ಸಾರ್ವಜನಿಕ ಅನ್ನ ಸಂತರ್ಪಣೆ ಮತ್ತಿತರ ಧಾರ್ಮಿಕ, ವೈದಿಕ ವಿಧಿಗಳು ಶುಕ್ರವಾರ ಇಜ್ಜ ಶಿವಕ್ಷೇತ್ರದ ಶ್ರೀ ಸತ್ಯನಾರಾಯಣ ಭಟ್‌ ನೇತೃತ್ವದಲ್ಲಿ ಜರಗಿತು.
ಬೆಳಗ್ಗೆ ದೇವತಾ ಪ್ರಾರ್ಥನೆ, ಪಂಚಗವ್ಯ ಪುಣ್ಯಾಹವಾಚನ ಗಣಪತಿ ಹವನ, ಜಗದಂಬಿಕಾ ದೇವರ ಸಾನ್ನಿಧ್ಯದಲ್ಲಿ ಪಂಚಾಮೃತ ಸೀಯಾಳ ಸಹಿತ ನವಕ ಕಲಶಾಭಿಷೇಕ ಮಹಮ್ಮಾಯಿ, ಗುಳಿಗ, ಅಣ್ಣಪ್ಪ ಸಾನ್ನಿಧ್ಯದಲ್ಲಿ ಕಲಶಾಭಿಷೇಕ, ಅಲಂಕಾರ ಪೂಜೆಗಳು ನಡೆದವು.

ಇದೇ ಸಂದರ್ಭ ಸೇವಾದಾರದಿಂದ ತೂಗುದೀಪ, ಊಟದ ತಟ್ಟೆ, ಚೆಂಡೆ, ಡೋಲು, ತಾಳ ದೇವಿಗೆ ಸಮರ್ಪಣೆ ನಡೆಯಿತು. ಸಂಜೆ ದೀಪ ಪ್ರಜ್ವಲನ ದೊಂದಿಗೆ ವಿವಿಧ ಭಜನ ಮಂಡಳಿಗಳಿಂದ ಭಜನ ಸಂಕೀರ್ತನೆ, ರಾತ್ರಿ ಅಣ್ಣಪ್ಪ, ಮಹ ಮ್ಮಾಯಿ, ಗುಳಿಗ, ಸಾನ್ನಿಧ್ಯದಲ್ಲಿ ವಿಶೇಷ ಪರ್ವಾರಾಧನೆ, ಜಗದಂಬಿಕಾ ದೇವರಿಗೆ ಸಾಮೂಹಿಕ ವಿಶೇಷ ರಂಗಪೂಜೆ,  ಭಜನ ಮಂಗಳ್ಳೋತ್ಸವ, ಮಹಾ ಮಂಗಳಾರತಿ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜೇಶ್‌ ಎನ್‌. ನೆಕ್ಕರೆ, ಪ್ರಧಾನ ಅರ್ಚಕ ಚಂದಪ್ಪ ಪೂಜಾರಿ, ಗೌರವಾಧ್ಯಕ್ಷ ಕೃಷ್ಣಪ್ಪ ನಾಯ್ಕ, ಆಡಳಿತ ಸಮಿತಿಯ ಅಧ್ಯಕ್ಷ ಡಿ. ಕೇಶವ ಗೌಡ, ಪ್ರಧಾನ ಕಾರ್ಯದರ್ಶಿ ಹರೀಶ್‌ ಎಸ್‌. ಕುಲಾಲ್‌, ಅರ್ಚಕ ಲೋಕೇಶ್‌ ಪೂಜಾರಿ, ಗೌರವ ಸಲಹೆಗಾರರಾದ ಕೊರಗಪ್ಪ ಪೂಜಾರಿ, ಜನಾರ್ದನ ಸಪಲ್ಯ, ಸೇಸಪ್ಪ ಸಪಲ್ಯ, ಪ್ರವೀಣ್‌ ಗೌಡ, ಉಪಾಧ್ಯಕ್ಷರಾದ ಶಂಕರ ಪೂಜಾರಿ, ಚಂದ್ರಶೇಖರ ಪೂಜಾರಿ, ಕೋಶಾಧಿಕಾರಿ ಪ್ರಕಾಶ್‌ ಪೂಜಾರಿ, ಜತೆ ಕಾರ್ಯದರ್ಶಿಗಳಾದ ಉಮಾಶಂಕರ ಕುಲಾಲ್‌, ಅಶ್ವಿ‌ನ್‌ ಕುಮಾರ್‌, ಗಣೇಶ್‌ ಸಪಲ್ಯ, ಸಂಚಾಲಕರಾದ ಜಯರಾಜ್‌ ರಾಮನಗರ, ಜನಾರ್ದನ ಕುಲಾಲ್‌, ಸಹಾಯಕ ಕಾರ್ಯದರ್ಶಿ ಸಂತೋಷ್‌ ಪೂಜಾರಿ, ಸಂಘಟನ ಕಾರ್ಯದರ್ಶಿಗಳಾದ ಯೋಗೀಶ್‌ ಕುಲಾಲ್‌, ವಸಂತ ಮಿಜಾರು, ಜಗದೀಶ್‌ ಪೂಜಾರಿ, ರಾಮಕೃಷ್ಣ ಪೂಜಾರಿ, ಓಬಯ್ಯ ಕುಲಾಲ್‌, ಉಮೇಶ್‌ ಪೂಜಾರಿ, ಚಿತ್ತರಂಜನ್‌, ಹರೀಶ್‌ ನಾಯ್ಕ, ಮಹಿಳಾ
ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here