Home ಧಾರ್ಮಿಕ ಸುದ್ದಿ ದೇವಿಬೆಟ್ಟ: ವಿಗ್ರಹಕ್ಕೆ ಸೂರ್ಯರಶ್ಮಿ ಸ್ಪರ್ಶ

ದೇವಿಬೆಟ್ಟ: ವಿಗ್ರಹಕ್ಕೆ ಸೂರ್ಯರಶ್ಮಿ ಸ್ಪರ್ಶ

156
0
SHARE

ಪುತ್ತೂರು : ಇಲ್ಲಿನ ರೈಲ್ವೇ ನಿಲ್ದಾಣ ಬಳಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಪ್ರತಿ ವರ್ಷದ ಕೊನೆಯ ಮಾಸವಾದ ಮೀನ ಸಂಕ್ರಮಣದ ದಿನ ನಡೆಯುವ ದೇವಿಗೆ ಸೂರ್ಯ ರಶ್ಮಿ ಸ್ಪರ್ಶ ಗುರುವಾರ ಬೆಳಗ್ಗೆ ನಡೆಯಿತು.

ಬೆಳಗ್ಗೆ 7ರಿಂದ 7.30ರ ವರೆಗೆ ದೇವಿಯ ಗರ್ಭಗುಡಿಯ ಮೂರು ಬಾಗಿಲುಗಳನ್ನು ದಾಟಿ ಸೂರ್ಯ ದೇವರ ಕಿರಣ ದೇವಿಯ ವಿಗ್ರಹವನ್ನು ಸ್ಪರ್ಶಿಸಿತು. ಈ ಸಂದರ್ಭದಲ್ಲಿ ಶ್ರೀ ದೇವಿಗೆ ವಿಶೇಷ ಪೂಜೆಯನ್ನು ಧರ್ಮದರ್ಶಿ ಐತಪ್ಪ ಸಪಲ್ಯ ಅವರು ನೆರವೇರಿಸಿದರು. ಪ್ರಮುಖರಾದ ಪಿ.ಜಿ. ಜಗನ್ನಿವಾಸ್‌ ರಾವ್‌, ಯು. ಲೋಕೇಶ್‌ ಹೆಗ್ಡೆ, ಪ್ರಭಾ ಆಚಾರ್ಯ, ವನಿತಾ ತನಿಯಪ್ಪ ಸಹಿತ ಹಲವು ಭಕ್ತರು ವಿಶೇಷವನ್ನು ಕಣ್ತುಂಬಿಕೊಂಡರು.

LEAVE A REPLY

Please enter your comment!
Please enter your name here