ಸುಳ್ಯ : ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಹಾಗೂ ನೂತನವಾಗಿ ನಿರ್ಮಿಸಿದ ರಕ್ತೇಶ್ವರಿ ದೈವಸ್ಥಾನದ ಪ್ರವೇಶೋತ್ಸವವು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರ ಮಾರ್ಗದರ್ಶನದೊಂದಿಗೆ ಬ್ರಹ್ಮಶ್ರೀ ಗುರುಪಾದ ತಂತ್ರಿ ಅವರ ನೇತೃತ್ವದಲ್ಲಿ ನಡೆಯಿತು.
ಆಚಾರ್ಯವರಣ, ಶಾಂತಿ ಪ್ರಾಯ ಶ್ಚಿತ್ತ ಹೋಮಗಳು, ತಣ್ತೀ ಹೋಮ, ದ್ಯಾನಾಧಿವಾಸ ನಡೆದು ಶ್ರೀ ದೇವರ ಮತ್ತು ಸಪರಿವಾರ ದೇವರ ಮತ್ತು ದೈವಗಳ ಪ್ರತಿಷ್ಠೆ ನಡೆಯಿತು.
ಈ ಸಂದರ್ಭ ಆಶಿರ್ವಚನ ನೀಡಿದ ಬ್ರಹ್ಮಶ್ರೀ ರವೀಶ್ ತಂತ್ರಿ ಅವರು, ಪೂರ್ವ ಪುಣ್ಯದ ಫಲದಿಂದ ಇಂತಹ ಭವ್ಯ ಕ್ಷೇತ್ರವನ್ನು ನಿರ್ಮಿಸಲು ಸಾಧ್ಯ. ಭಗವಂತನ ಇಚ್ಛೆ ದೈವ-ದೇವರ ಮಾರ್ಗದರ್ಶನ ಕ್ಷೇತ್ರ ನಿರ್ಮಾಣಕ್ಕೆ ಪ್ರೇರಣೆಯಾಗಿದೆ ಎಂದರು.
ಕಾಟೂರಾಯ ಮಹಾಲಿಂಗೇಶ್ವರ ಭಟ್, ವಿಶ್ವವಿನೋದ ಬನಾರಿ, ನವೋ ದಯ ತಿರುಮಲೇಶ್ವರ ಭಟ್, ಕನ್ಯಾನ ಕುಮಾರಸ್ವಾಮಿ, ಡಿ. ಸೂರ್ಯ ನಾರಾಯಣ, ಕಲ್ಲಡ್ಕ ಶಿವರಾಯ ಕಲ್ಲೂರಾಯ, ಡಾ| ಪುರು ಷೋತ್ತಮ ಭಟ್ ಕುಂಬಳೆ, ನಂದಕಿಶೋರ ಬನಾರಿ, ಕೃಷ್ಣ ಬಟ್ ಮುರೂರು, ಬಂದ್ಯಡ್ಕ ದಯಾನಂದ ಗೌಡ, ಬೆನಕ ಸುಂದರೇಶ, ಶ್ರೀನಿಯಲ ಬೆಳ್ಳಿಪ್ಪಾಡಿ, ಪುರೂಹಿತ ನಾಗರಾಜ ಭಟ್, ಕೋಟಿಗದ್ದೆ ಗೋಪಾಲಯ್ಯ, ಶಿವಕುಮಾರ್ ಭಟ್ ಎಡೆಹುಣಿ, ಲಿಂಗಪ್ಪ ಗೌಡ ಬಂದ್ಯಡ್ಕ, ಮುದಿಯಾರು ಜಗನ್ನಾಥ ರೈ ಉಪಸ್ಥಿತರಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ ಡಿ.ರಾಮ ಭಟ್ ಸ್ವಾಗತಿಸಿದರು. ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, ಬೆಳ್ಳಿಪ್ಪಾಡಿ ಸದಾಶಿವ ರೈ ನಿರೂಪಿಸಿದರು.