Home ಧಾರ್ಮಿಕ ಸುದ್ದಿ ದೀಪೋತ್ಸವ, ಬಲಿ ಉತ್ಸವ

ದೀಪೋತ್ಸವ, ಬಲಿ ಉತ್ಸವ

1377
0
SHARE

ಉಳಾಯಿಬೆಟ್ಟು: ಇಲ್ಲಿನ ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇಗುಲದ ದೀಪೋತ್ಸವ ಮತ್ತು ಬಲಿ ಉತ್ಸವವು ಇತ್ತೀಚೆಗೆ ನಡೆಯಿತು. ಕುಡುಪು ನರಸಿಂಹ ತಂತ್ರಿಗಳ ಉಪಸ್ಥಿತಿಯಲ್ಲಿ ಜರಗಿದ ದೀಪೋತ್ಸವಕ್ಕೆ ವಿದ್ಯುತ್‌ ಅಲಂಕಾರ ದೀಪಗಳ ಸಾಲು ಹಾಗೂ ಆಕರ್ಷಕ ಸುಡು ಮದ್ದು ಮೆರಗು ನೀಡಿತು.

ಬೆಳಗ್ಗೆ ಗಣಪತಿಹೋಮ, ಸೀಯಾಳ ಅಭಿಷೇಕ, ಶತರುದ್ರಾಭಿಷೇಕ, ವಿಶ್ವನಾಥ ದೇವರಿಗೆ ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 6 ಗಂಟೆಗೆ ಭಜನೆ, ರಂಗಪೂಜೆ, ದೀಪೋತ್ಸವ ಹಾಗೂ ಬಲಿ ಉತ್ಸವ ಜರಗಿತು.

ದೇಗುಲದ ಮೊಕ್ತೇಸರರಾದ ಶ್ರೀನಿವಾಸ ಶೆಟ್ಟಿ ಸಾಲೆಮನೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಜಾತಾ ಅಶೋಕ್‌ ಶೆಟ್ಟಿ, ಮೊಕ್ತೇಸರರಾದ ಹರೀಶ್‌ ಭಟ್‌ ಸಾಲೆ, ನಿರಂಜನ್‌ ಶೆಟ್ಟಿ ಸಾಲೆಮನೆ, ಶ್ರೀನಿವಾಸ ಮಾಣೈ, ಸುಗುಣಾ ಶೆಟ್ಟಿ ಸಾಲೆ, ವಾಸುದೇವ ಮೂಲ್ಯ, ಗೀತಾ ಗೋಪಾಲ ಸಪಲಿಗ, ಲಕ್ಷ್ಮಣ್‌ ಸಾಲ್ಯಾನ್‌, ಚಂದ್ರಶೇಖರ ಮೂಡುಜಪ್ಪು, ರಾಜೀವ ಶೆಟ್ಟಿ ಸಲ್ಲಾಜೆ, ಆನಂದ ಶೆಟ್ಟಿ ಸಲ್ಲಾಜೆ, ಮಂಜುನಾಥ ಭಂಡಾರಿ, ಮೇಯರ್‌ ಭಾಸ್ಕರ್‌ ಕೆ., ಚಂದ್ರಹಾಸ್‌ ರೈ ವಾಮಂಜೂರು ಹಾಗೂ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here