Home ಧಾರ್ಮಿಕ ಸುದ್ದಿ ಅಲಂಗಾರು: ಶ್ರೀ ಗುರು ಆರಾಧನೋತ್ಸವ

ಅಲಂಗಾರು: ಶ್ರೀ ಗುರು ಆರಾಧನೋತ್ಸವ

1384
0
SHARE

ಮೂಡಬಿದಿರೆ: ಅಲಂಗಾರು ಜಗದ್ಗುರು ಶ್ರೀ ಅಯ್ಯ (ನಾಗಲಿಂಗ) ಸ್ವಾಮಿ ಮಠದಲ್ಲಿ ರವಿವಾರ ಶ್ರೀ ಗುರು ಆರಾಧನೋತ್ಸವ ಜರಗಿತು.
ಶನಿವಾರ ಸಂಜೆ ಪ್ರಾರಂಭವಾದ ಭಜನ ಸಂಕೀರ್ತನೆಯಲ್ಲಿ ವಿವಿಧೆಡೆಗಳ ಭಜನ ಮಂಡಳಿಗಳು ಪಾಲ್ಗೊಂಡಿದ್ದು, ರವಿವಾರ ಸೂರ್ಯೋದಯಕ್ಕೆ ಭಜನೆ ಮಂಗಳವಾಯಿತು.

ಶ್ರೀಗುರುದೇವರಿಗೆ ಪಂಚಾಮೃ ತಾಭಿಷೇಕ ನೆರವೇರಿಸ ಲಾಯಿತು. ಬೆಳಗ್ಗೆ 11 ಗಂಟೆಗೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಸಂದರ್ಶನ, ಮಹಾಪೂಜೆ ಬಳಿಕ ಶ್ರೀಮಠಕ್ಕೆ ಪುನರಾಗಮನವಾಗಿ ಮಹಾಪೂಜೆ ನಡೆಯಿತು.

ಅನಂತರ ಮಹಾಸಂತರ್ಪಣೆ ನಡೆಯಿತು. ವಿಶ್ವಕರ್ಮ ಸಂಸ್ಕೃತಿ ಪ್ರಸಾರ ಪ್ರತಿಷ್ಠಾನ ದವರು ಕುಂಜೂರು ಗಣೇಶ ಆಚಾರ್ಯ ವಿರಚಿತ ‘ಸದ್ಗುರು ಕಾಶಿ ಶ್ರೀ ಕಾಳಹಸ್ತಿ ಚರಿತ್ರೆ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಸಿಕೊಟ್ಟರು.

ಮಾಜಿ ಸಚಿವ ಕೆ. ಅಭಯಚಂದ್ರ, ಜನಪ್ರತಿನಿಧಿಗಳು, ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್‌. ಜಯಕರ ಪುರೋಹಿತ್‌, ಮೊಕ್ತೇಸರ ಉಳಿಯ ಬಾಲಕೃಷ್ಣ ಆಚಾರ್ಯ, ಬ್ರಹ್ಮಶ್ರೀ ಕೇಶವ ಆಚಾರ್ಯ, ಶ್ರೀ ಮಠದ ವ್ಯವಸ್ಥಾಪಕ ಬಿ. ವಿಶ್ವನಾಥ ಪುರೋಹಿತ್‌ ಹಾಗೂ ವೈದಿಕ ವೃಂದ, ಬಿ. ಆರ್‌. ಗುರುಪ್ರಸಾದ್‌, ಜಿಲ್ಲೆ ಮತ್ತು ಹೊರಜಿಲ್ಲೆಗಳ ಕಾಳಿಕಾಂಬಾ ಕ್ಷೇತ್ರಗಳ ಪ್ರಮುಖರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here