Home ಧಾರ್ಮಿಕ ಸುದ್ದಿ ಶಿವಪಾಡಿ ದೇಗುಲಕ್ಕೆ ದತ್ತಾನಂದ ಸರಸ್ವತಿ ಸ್ವಾಮೀಜಿ

ಶಿವಪಾಡಿ ದೇಗುಲಕ್ಕೆ ದತ್ತಾನಂದ ಸರಸ್ವತಿ ಸ್ವಾಮೀಜಿ

1343
0
SHARE

ಉಡುಪಿ: ಕುಡಾಳ್‌ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಮಾಜದ ಸ್ವಾಮೀಜಿ ಶ್ರೀಮಠ ಸಂಸ್ಥಾನ ದಾಭೋಲಿಯ ಶ್ರೀಮತ್‌ ಪ್ರದ್ಯುಮ್ನಾನಂದ ಸ್ವಾಮಿ ಮಹಾರಾಜರ ಶಿಷ್ಯ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಅವರು ಮಾ. 6 ಮತ್ತು 7ರಂದು ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ವಿದ್ಯಾರ್ಥಿಗಳೊಂದಿಗೆ ಸಂವಾದ
ಮಾ. 6ರ ಬೆಳಗ್ಗೆ 11ಕ್ಕೆ ಶ್ರೀಗಳನ್ನು ಸ್ವಾಗತಿಸಲಾಗುವುದು. ಅಪರಾಹ್ನ 3.30ಕ್ಕೆ ಚೇರ್ಕಾಡಿ ಮುಂಡ್ಕಿನಜೆಡ್ಡು ಆರ್‌.ಕೆ. ಪಾಟ್ಕರ್‌ ಶಾರದಾ ಶಾಲೆಗೆ ಶ್ರೀಗಳು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು.

ಮಾ. 7ರ ಬೆಳಗ್ಗೆ 10.30ರಿಂದ ಶಿವಪಾಡಿ ದೇಗುಲದಲ್ಲಿ ಸಮಾಜ ಬಾಂಧವರಿಂದ ಶ್ರೀಗಳಿಗೆ ಗುರುವಂದನ, ಅನಂತರ ಸ್ವಾಮೀಜಿ ಅವರಿಂದ ಅನುಗ್ರಹ ಸಂದೇಶ, ಅಪರಾಹ್ನ 3.30ಕ್ಕೆ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡುವರು ಎಂದು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here