Home ಧಾರ್ಮಿಕ ಸುದ್ದಿ ಕಲ್ಲೇಗ ಜುಮಾ ಮಸೀದಿ: ದರ್ಸ್‌ ಪ್ರಾರಂಭ

ಕಲ್ಲೇಗ ಜುಮಾ ಮಸೀದಿ: ದರ್ಸ್‌ ಪ್ರಾರಂಭ

1180
0
SHARE

ಕಬಕ: ಇತಿಹಾಸ ಪ್ರಸಿದ್ಧ ಕಲ್ಲೇಗ ಜುಮಾ ಮಸೀದಿಯಲ್ಲಿ ರವಿವಾರ ಮಗ್ರಿಬ್‌ ನಮಾಝ್ ಬಳಿಕ ಪ್ರಸಕ್ತ ಸಾಲಿನ ದರ್ಸ್‌ ಪ್ರಾರಂಭೋತ್ಸವ ನಡೆಯಿತು. ಸ್ಥಳೀಯ ಮುದರ್ರಿಸ್‌ ಅಬೂಬಕರ್‌ ಸಿದ್ದೀಕ್‌ ಅಹ್ಮದ್‌ ಅಲ್‌ ಜಲಾಲಿ ಉಸ್ತಾದ್‌ ಕಾರ್ಯಕ್ರಮ ಉದ್ಘಾಟಿಸಿ, ವಿಶ್ವದಲ್ಲಿ
ದರ್ಸ್‌ ಸ್ಥಾಪನೆಯ ರೂವಾರಿ ಪ್ರವಾದಿ ಮುಹಮ್ಮದ್‌, ಶಾಫಿಈ ಇಮಾಮಾ ಅವರ ಸ್ಮರಣೆಯೊಂದಿಗೆ ಫಾತಿಹಾ ಹಾಗೂ ಪ್ರಾರ್ಥನೆಯೊಂದಿಗೆ ಮುತ ಅಲ್ಲಿಮರಿಗೆ ಕಿತಾಬ್‌ ಹೇಳಿ ಕೊಟ್ಟು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲೇ ಇತಿಹಾಸ ಪ್ರಸಿದ್ಧವಾದ ಕಲ್ಲೇಗ ಜಮಾಅತ್‌ ಪುತ್ತೂರು ತಾಲೂಕಿನ ಬಹು ದೊಡ್ಡ ಮೂರು ಜಮಾಅತ್‌ಗಳಲ್ಲಿ ಒಂದು. ಹಲವಾರು ವರ್ಷಗಳಿಂದ ಮೇಧಾವಿಗಳು ದರ್ಸ್‌ ನಡೆಸಿದ ಇತಿಹಾಸವಿರುವ ಈ ಕಲ್ಲೇಗ ಮಸೀದಿಗೆ ಪೂರ್ವಿಕರ ಸೇವೆ ಅಪಾರವಾಗಿದೆ ಎಂದು ವಿವರಿಸಿದರು.

ಕಲ್ಲೇಗ ಜಮಾಅತ್‌ ಕಮಿಟಿಯ ಅಧ್ಯಕ್ಷ ಬಿ.ಎ. ಶಕೂರ್‌, ಜಮಾಅತ್‌ ಕಮಿಟಿಯ ಪದಾಧಿಕಾರಿಗಳು, ಜಮಾಅತ್‌ ಬಾಂಧವರು, ಸದರ್‌ ಮುಅಲ್ಲಿಮ್‌ ಅಬ್ದುಲ್‌ ರಫಿಕ್‌ ಅಝ್ಹರಿ, ಮುಅಲ್ಲಿಮ್‌ ತಾಜುದ್ದೀನ್‌ ಫೈಝೀ ಉಸ್ತಾದ್‌, ಖಾಸೀಂ ದಾರಿಮಿ ಉಸ್ತಾದ್‌, ಅಬ್ದುಲ್‌ ಹಮೀದ್‌ ಉಸ್ತಾದ್‌, ವಿದ್ಯಾರ್ಥಿಗಳು ಪಾಲ್ಗೊಂಡು ಸಹಕರಿಸಿದರು.

LEAVE A REPLY

Please enter your comment!
Please enter your name here