Home ಧಾರ್ಮಿಕ ಸುದ್ದಿ ದರ್ಬೆ: ನೂತನ ಮಸೀದಿ ಉದ್ಘಾಟನೆ

ದರ್ಬೆ: ನೂತನ ಮಸೀದಿ ಉದ್ಘಾಟನೆ

904
0
SHARE

ದರ್ಬೆ: ನಗರದ ದರ್ಬೆಯಲ್ಲಿ ನೂತನವಾಗಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಹಮ್ಮದೀಯ ಜುಮಾ ಮಸೀದಿಯ ಉದ್ಘಾಟನೆ, ವಕ್ಫ್ ಸಮರ್ಪಣೆ ಹಾಗೂ ಜುಮಾ ಸ್ಥಾಪನ ಕಾರ್ಯಕ್ರಮ ನಡೆಯಿತು.

ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌ ಮಸೀದಿಯ ವಕ್ಫ್ ಸಮರ್ಪಿಸಿ ಜುಮ್ಮಾ ಸ್ಥಾಪನೆ ಮಾಡಿದರು. ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್‌ ಅಸಯ್ಯದ್‌ ಅಹ್ಮದ್‌ ಪೂಕೋಯ ತಂಙಳ್‌ ಉದ್ಘಾಟನೆ ನೆರವೇರಿಸಿದರು. ಸಮಸ್ತ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಹಾಗೂ ಮೂಡುಗೆರೆ ಖಾಝಿ ಶೈಖುನಾ ಎಂ.ಎ. ಖಾಸಿಂ ಮುಸ್ಲಿಯಾರ್‌ ಕಾಸರಗೋಡು ಅವರು ಖುತ್‌ಬಾ ನಿರ್ವಹಣೆಯ ನೇತೃತ್ವ ವಹಿಸಿದ್ದರು.

ಪುತ್ತೂರು ಅನ್ಸಾರುದ್ದೀನ್‌ ಜಮಾಅತ್‌ ಕಮಿಟಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್‌ ಅಧ್ಯಕ್ಷತೆ ವಹಿಸಿದ್ದರು. ದರ್ಬೆ ಮಹಮ್ಮದೀಯ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್‌ ಅಝಾದ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರ್ನಾಟಕ ಇಸ್ಲಾಮಿಕ್‌ ಅಕಾಡೆಮಿಯ ಅಧ್ಯಕ್ಷ ಕೆ.ಪಿ. ಅಹ್ಮದ್‌, ವಕ್ಫ್ ಬೋರ್ಡ್‌ ಸಮಿತಿಯ ಮಾಜಿ ಸದಸ್ಯ ಹಸನ್‌, ನಗರಸಭಾ ಮಾಜಿ ಸದಸ್ಯ ಎಚ್. ಮಹಮ್ಮದ್‌ ಆಲಿ, ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ಯಾಕೂಬ್‌ ದರ್ಬೆ, ನೂರುದ್ದೀನ್‌ ಸಾಲ್ಮರ, ಹನೀಫ್‌ ಮಾಡಾವು, ಜಿ.ಪಂ. ಸದಸ್ಯ ಎಂ.ಎಸ್‌. ಮಹಮ್ಮದ್‌ ಪಾಲ್ಗೊಂಡರು.

ಅಬ್ದುಲ್ ಹಮೀದ್‌ ಮುಸ್ಲಿಯಾರ್‌ ಹನೀಫಿ ಸ್ವಾಗತಿಸಿ, ಅನ್ವರ್‌ ಸಾಧಿಕ್‌ ಮುಸ್ಲಿ ಯಾರ್‌ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here