Home ಧಾರ್ಮಿಕ ಸುದ್ದಿ ಶ್ರೀಕ್ಷೇತ್ರ ಕಾರಿಂಜಕ್ಕೆ ದಾಭೋಲಿಯ ಕಿರಿಯ ಶ್ರೀ ಭೇಟಿ

ಶ್ರೀಕ್ಷೇತ್ರ ಕಾರಿಂಜಕ್ಕೆ ದಾಭೋಲಿಯ ಕಿರಿಯ ಶ್ರೀ ಭೇಟಿ

361
0
SHARE

ಪುಂಜಾಲಕಟ್ಟೆ : ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಮಾಜದ ಗುರುಪೀಠ ಮಹಾರಾಷ್ಟ್ರದ ಶ್ರೀ ಮಠ… ಸಂಸ್ಥಾನಂ ದಾಭೋಲಿಯ ಕಿರಿಯ ಶ್ರೀಗಳಾದ ಶ್ರೀ ದತ್ತಾನಂದ ಸ್ವಾಮೀಜಿ ಮಹಾರಾಜ್‌ ಅವರು ಭೂ ಕೈಲಾಸ ಪ್ರತೀತಿಯ ಕಾವಳಮೂಡೂರು ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ ಅವರು ಸ್ವಾಮೀಜಿ ಅವರನ್ನು ಸ್ವಾಗತಿಸಿ, ಕ್ಷೇತ್ರದ ಪರಿಚಯ ಮಾಡಿದರು ಹಾಗೂ ಸ್ವಾಮೀಜಿ ಅವರನ್ನು ಗೌರವಿಸಿದರು.

ಸಮಿತಿ ಸದಸ್ಯರಾದ ಸದಾಶಿವ ಪ್ರಭು, ವಿಶ್ವನಾಥ ಪೂಜಾರಿ, ರಾಧಾಕೃಷ್ಣ ಶೆಣೈ ವಗ್ಗ, ದೇವಸ್ಥಾನದ ಮೇಲ್ವಿಚಾರಕ ಸತೀಶ್‌ ಪ್ರಭು, ಕಶೆಕೋಡಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಗೋಪಾಲ ಶೆಣೈ, ಪ್ರಮುಖರಾದ ಹರೀಶ್‌ ಭಟ್‌.ಎಂ., ಮುರಳೀಧರ ಪ್ರಭು, ಶಾಂತಾರಾಮ ಪ್ರಭು, ನ್ಯಾಯವಾದಿ ರಾಜಾರಾಮ ನಾಯಕ್‌, ಎಂ.ಪಿ. ಪ್ರಭು, ವಿಜಯ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here