Home ಧಾರ್ಮಿಕ ಸುದ್ದಿ ಕುಕ್ಕೆ ದೇಗುಲಕ್ಕೆ ದೈವಗಳ ಭಂಡಾರ ಆಗಮನ

ಕುಕ್ಕೆ ದೇಗುಲಕ್ಕೆ ದೈವಗಳ ಭಂಡಾರ ಆಗಮನ

407
0
SHARE

ಸುಬ್ರಹ್ಮಣ್ಯ : ಪ್ರಸಿದ್ದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಪ್ರಯುಕ್ತ ದೇವರಗದ್ದೆಯ ಹೊಸಳಿಗಮ್ಮ ದೈವದ ಗುಡಿಯಿಂದ ಲಕ್ಷದೀಪೋತ್ಸವದ ದಿನ ಗುರುವಾರ ಬೆಳಗ್ಗೆ ದೈವದ ಭಂಡಾರವು ದೇಗುಲಕ್ಕೆ ಆಗಮಿಸಿತು.

ಆರಂಭದಲ್ಲಿ ದೇವರಗದ್ದೆಯ ಹೊಸಳಿ ಗಮ್ಮ ದೈವದ ಗುಡಿಯಲ್ಲಿ ಪೂಜೆ ನೆರವೇ ರಿತು. ಪುರೋಹಿತ ನಾರಾಯಣ ಭಟ್‌ ವಿಧಿ-ವಿಧಾನಗಳನ್ನು ನೆರವೇರಿಸಿದರು. ಬಳಿಕ ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಶ್ರೀ ದೇಗುಲಕ್ಕೆ ದೈವದ ಭಂಡಾರವನ್ನು ಬ್ಯಾಂಡ್‌, ಮಂಗಳವಾದ್ಯ ಮತ್ತು ಬಿರುದಾವಳಿ ಗಳೊಂದಿಗೆ ತರಲಾಯಿತು.

ಶ್ರೀ ದೇಗುಲದ ಹೊಸಳಿಗಮ್ಮ ಗುಡಿಯಲ್ಲಿ ಭಂಡಾರವನ್ನು ಇರಿಸಿದ ಬಳಿಕ ಪುರೋಹಿತರು ಪ್ರಸಾದ ನೀಡಿದರು. ಶ್ರೀ ದೇವರ ಉತ್ಸವಾದಿಗಳ ಕೊನೆಯ ದಿನ ದೇವರಗದ್ದೆಗೆ ಮತ್ತೆ ಭಂಡಾರ ಹಿಂತಿರುಗಲಿದೆ.

ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸದಸ್ಯ ಕೃಷ್ಣಮೂರ್ತಿ ಭಟ್‌, ಮಾಧವ ಡಿ., ದೇಗುಲದ ಹೆಬ್ಟಾರ್‌ ಷಣ್ಮುಖ ಉಪಾರ್ಣ, ದೇಗುಲದ ನಾಗೇಶ್‌ ಎ.ವಿ, ಪದ್ಮನಾಭ ಶೆಟ್ಟಿಗಾರ್‌, ಶಿವಪ್ರಸಾದ್‌ ಸಿ.ಎಸ್‌., ಎನ್‌.ಸಿ. ಕೃಷ್ಣ, ಲೋಕೇಶ್‌ ಎಂ.ಆರ್‌., ಜಾನು, ದಯಾನಂದ ಹೊಸೋಳಿಕೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here