Home ಧಾರ್ಮಿಕ ಸುದ್ದಿ ದಡ್ಡಲಕಾಡು ಶ್ರೀ ಜಗದಂಬಿಕಾ ಕ್ಷೇತ್ರ ಅಖಂಡ ನವಾಹ ಭಜನ ಸಂಕೀರ್ತನೆ

ದಡ್ಡಲಕಾಡು ಶ್ರೀ ಜಗದಂಬಿಕಾ ಕ್ಷೇತ್ರ ಅಖಂಡ ನವಾಹ ಭಜನ ಸಂಕೀರ್ತನೆ

1310
0
SHARE

ಬಂಟ್ವಾಳ : ಕಾರಣಿಕ ಪ್ರಸಿದ್ಧ ಮೂಡನಡುಗೋಡು ಗ್ರಾಮ ದಡ್ಡಲ ಕಾಡು ದೇವಿನಗರದ ಶ್ರೀ ಜಗದಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರದಲ್ಲಿ ಮಾ. 28ರಿಂದ ಎ. 6 ವರೆಗೆ ಸಂಕಲ್ಪಿಸಿದ್ದ ಅಖಂಡ ನವಾಹ ಭಜನ ಸಂಕೀರ್ತನೆಗೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾ.28 ರಂದು ಸೂರ್ಯೋದಯಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು.

ಶ್ರೀಗಳು ಸ್ಥಳೀಯ ಭಜನ ಹಾಡುಗಾರರ ಜತೆ ತಾಳ ಬಡಿದು, ಸ್ವರ ಸೇರಿಸಿ ಸ್ಫೂರ್ತಿ ನೀಡಿದರು. ಸೂರ್ಯೋದಯದ ಹೊತ್ತಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಪದಾಧಿಕಾರಿ ಪ್ರಮುಖರಾದ ರಾಮ್‌ದಾಸ್‌ ಬಂಟ್ವಾಳ, ಜಿ. ಆನಂದ, ಧರ್ಣಪ್ಪ ಪೂಜಾರಿ ರಾಮನಗರ, ಸಂಜೀವ ಪೂಜಾರಿ ಪಿಲಿಂಗಾಲು, ರಾಮಚಂದ್ರ ಗೌಡ ಮಣಿ, ಡಿ. ಕೇಶವ ಗೌಡ, ರಾಜೇಶ ಎನ್‌. ನೆಕ್ಕರೆ, ರಾಮಚಂದ್ರ ಶೆಟ್ಟಿ ದಂಡೆ, ಚಂದಪ್ಪ ಪೂಜಾರಿ, ಕೃಷ್ಣಪ್ಪ ನಾಯ್ಕ, ಹರೀಶ್‌ ಎಸ್‌. ಕುಲಾಲ್‌, ಲೊಕೇಶ್‌ ಪೂಜಾರಿ ಮತ್ತಿತರರು ಜೊತೆಗಿದ್ದರು. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೋಜನ, ಸಂಜೆಯ ಉಪಾಹಾರ, ರಾತ್ರಿ ಊಟ, ತಡರಾತ್ರಿ ಫಲಾಹಾರ ವ್ಯವಸ್ಥೆಯನ್ನು ಮಾಡಲಾಗಿದೆ.

ಭಜನೆ
ಮಾ. 28ರಂದು ನಡೆದ ಭಜನೆಯಲ್ಲಿ ದಡ್ಡಲಕಾಡು ಶ್ರೀ ಜಗದಂಬಿಕಾ ಭಜನ ಮಂಡಳಿ ದೇವಿನಗರ, ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ, ಪೊಳಲಿ ಶ್ರೀ ರಾಜರಾಜೇಶ್ವರೀ ಭಜನ ಮಂಡಳಿ, ಪೊಳಲಿ ಶ್ರೀ ರಾಜರಾಜೇಶ್ವರೀ ಮಹಿಳಾ ಭಜನ ಮಾತೃ ವಿಭಾಗ, ಪೊಳಲಿ ಶ್ರೀ ರಾಜರಾಜೇಶ್ವರೀ ಮಹಿಳಾ ಮಂಡಳಿ, ಮಂಚಿ ಶ್ರೀ ಚಾಮುಂಡೇಶ್ವರೀ ಭಜನ ಮಂಡಳಿ, ನೆತ್ತರಕೆರೆ ಶ್ರೀ ನವೋದಯ ಕಲಾವೃಂದ, ಮಂಗಳೂರು ಶ್ರೀ ಹರಿಕೃಷ್ಣ ಭಜನ ಮಂಡಳಿ, ಮಾಣೂರು ಶ್ರೀ ಅನಂತಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನ, ಚಂಡ್ತಿಮಾರ್‌ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿಯವರು ಕಾರ್ಯಕ್ರಮ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here