Home ಧಾರ್ಮಿಕ ಸುದ್ದಿ ಡಿ.16-18: ವಾರ್ಷಿಕೋತ್ಸವ, ಢಕ್ಕೆ ಬಲಿ ಸೇವೆ

ಡಿ.16-18: ವಾರ್ಷಿಕೋತ್ಸವ, ಢಕ್ಕೆ ಬಲಿ ಸೇವೆ

1303
0
SHARE

ಬ್ರಹ್ಮಾವರ: ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಡಿ.16ರಿಂದ 18ರ ವರೆಗೆ ವಾರ್ಷಿಕೋತ್ಸವ ಮತ್ತು ಢಕ್ಕೆ ಬಲಿ ಸೇವೆ ಜರಗಲಿದೆ. ಡಿ.16ರ ಬೆಳಗ್ಗೆ ಬ್ರಹ್ಮಶ್ರೀ ವೇ.ಮೂ. ಹೃಷಿಕೇಶ ಬಾಯರಿ ಅವರ ನೇತೃತ್ವದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ಪಂಚವಿಂಶತಿ ಕಲಶಾಭಿಷೇಕ, ಅಧಿವಾಸ ಹೋಮ ಹಾಗೂ ಷಣ್ಣಾಳಿಕೇರ ಗಣಯಾಗ, ಶ್ರೀ ದುರ್ಗಾಹೋಮ ಮತ್ತು ಸಪ್ತಶತಿ ಪಾರಾಯಣ, ಮಧ್ಯಾಹ್ನ 11ಕ್ಕೆ ಧಾರ್ಮಿಕ ಸಭೆ, 12.30ಕ್ಕೆ ಸ್ಯಾಕೊಫೋನ್‌ ವಾದನ, ಮಧ್ಯಾಹ್ನ 1ರಿಂದ ಮಹಾ ಅನ್ನಸಂತರ್ಪಣೆ ಜರಗಲಿದೆ.

ಸಂಜೆ ಲಲಿತಾ ಸಹಸ್ರನಾಮ ಪಾರಾಯಣ, ಭಜನೆ, ಪುಷ್ಪಪೂಜೆಹಾಗೂ ಡಿ.17ರ ಬೆಳಗಿನ ಜಾವ 5ಕ್ಕೆ ಹಾಲಿಟ್ಟು ಸೇವೆ ಹಾಗೂ ಢಕ್ಕೆಬಲಿ ಸೇವೆಯೊಂದಿಗೆ ವಾರ್ಷಿಕೋತ್ಸವ ಮತ್ತು ನಾಗದರ್ಶನ ಸೇವೆ, ತುಲಾಭಾರ ಸೇವೆ, ಮಹಾಪೂಜೆ, ಮಹಾಪ್ರಸಾದ ವಿತರಣೆ ಜರಗಲಿದೆ.

LEAVE A REPLY

Please enter your comment!
Please enter your name here