Home ಧಾರ್ಮಿಕ ಸುದ್ದಿ ಕುಕ್ಕೆ: ವಿದ್ಯಾರ್ಥಿಗಳಿಂದಹಸಿರು-ಕಾಣಿಕೆ ಸಮರ್ಪಣೆ

ಕುಕ್ಕೆ: ವಿದ್ಯಾರ್ಥಿಗಳಿಂದಹಸಿರು-ಕಾಣಿಕೆ ಸಮರ್ಪಣೆ

216
0
SHARE

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಕುಮಾರ ಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಜಾತ್ರೆ ಪ್ರಯುಕ್ತ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಹಸಿರು-ಕಾಣಿಕೆಯನ್ನು ಗುರುವಾರ ಸಮರ್ಪಿಸಿದರು. ಶಾಲಾ ಆಡಳಿತ ಮಂಡಳಿಯ ಸೂಚನೆ ಯಂತೆ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ಅಕ್ಕಿ, ತೆಂಗಿನಕಾಯಿ, ಅಡಿಕೆ, ಸೀಯಾಳ, ಬಾಳೆಎಲೆ, ಬಾಳೆಗೊನೆ, ಕಬ್ಬು, ಹಿಂಗಾರ ಹಾಗೂ ವಿವಿಧ ರೀತಿಯ ತರಕಾರಿಗಳನ್ನು ತಂದು ಸಮರ್ಪಿಸಿದರು.

ಈ ಸಂದರ್ಭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸಮಿತಿಯ ಸದಸ್ಯರು ಮತ್ತು ದೇಗುಲದ ಸಿಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳೊಂದಿಗೆ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್‌ ಪ್ರಸಾದ್‌, ಸಂಚಾಲಕ ಚಂದ್ರಶೇಖರ ನಾಯರ್‌, ರವಿ ಕಕ್ಕೆಪದವು, ಮುಖ್ಯ ಶಿಕ್ಷಕಿ ವಿದ್ಯಾರತ್ನ ಎಚ್‌. ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here