Home ಧಾರ್ಮಿಕ ಸುದ್ದಿ “ಕ್ಷೇತ್ರ ನಿರ್ಮಾಣ ಪುಣ್ಯದ ಫ‌ಲ’

“ಕ್ಷೇತ್ರ ನಿರ್ಮಾಣ ಪುಣ್ಯದ ಫ‌ಲ’

1694
0
SHARE

ಬಂಟ್ವಾಳ : ದೇವಸ್ಥಾನ ನಿರ್ಮಿ ಸುವುದಕ್ಕೂ ಯೋಗ ಬೇಕು. ನಮ್ಮ ಪೂರ್ವ ಪುಣ್ಯದ ಫಲದಿಂದ ಇಂತಹ ಒಂದು ಕ್ಷೇತ್ರ ನಿರ್ಮಿಸಲು ಸಾಧ್ಯ. ಭಗವಂತನ ಇಚ್ಛೆ, ದೈವದ ಮಾರ್ಗದರ್ಶನವೇ ಕ್ಷೇತ್ರ ನಿರ್ಮಾಣದ ಕೆಲಸ ಮಾಡುವುದಕ್ಕೆ ನಮ್ಮೆಲ್ಲರಿಗೆ ಪ್ರೇರಣೆಯಾಗಿದೆ. ಇಲ್ಲಿ ನಡೆದಿರುವ ಕೆಲಸ ಸಮಾಜಕ್ಕೆ ಮಾದರಿ ಎಂದು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಬುಧವಾರ ಮೊಗರನಾಡು ಸಾವಿರ ಸೀಮೆ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ಶ್ರೀ ದೇವರ ಪುನಃಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರು ಶುಭ ಹಾರೈಸಿ, ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, ಎಲ್ಲ ಕೆಲಸಗಳ ಹಿಂದೆ ಸಾಧನೆ ಬೇಕು. ಇದೊಂದು ಮಾದರಿ ಕೆಲಸ, ರಾತ್ರಿ ಹಗಲೆನ್ನದೆ ದುಡಿಯುವ ಜತೆ ಸ್ಥಿತಪ್ರಜ್ಞರಾಗಿ ಟೀಕೆಗಳನ್ನು ಎದುರಿಸುವ ತಾಳ್ಮೆಯೂ ಬೇಕು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶುಭ ಹಾರೈಸಿದರು. ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಶೋಕ ಕುಮಾರ್‌ ಬರಿಮಾರು ಅಧ್ಯಕ್ಷತೆ ವಹಿಸಿದ್ದರು.

ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್‌, ನರಹರಿ ಪರ್ವತ ಶೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಪ್ರಶಾಂತ ಮಾರ್ಲ, ಸಾದಿಕುಕ್ಕು ಶ್ರೀ ಗುಡ್ಡೆಚಾಮುಂಡಿ ದೈವಸ್ಥಾನದ ಅಧ್ಯಕ್ಷ ಶ್ರೀಕಾಂತ ಆಳ್ವ ಮಾತನಾಡಿದರು. ಪ್ರಮುಖರಾದ ಪೃಥ್ವಿರಾಜ ಬಂಗ, ನರೇಂದ್ರ ರೈ ನೆಲೊ¤àಟ್ಟು, ಅಪ್ರಾಯ ಪೈ, ಸಚಿನ್‌ ರೈ ಮಾಣಿಗುತ್ತು, ಪಂಡಿಕಾಯಿ ಶಂಕರನಾರಾಯಣ ಭಟ್‌, ಡಾ| ರಾಮಕೃಷ್ಣ ಶೆಟ್ಟಿ, ಗಡ್ಡೆಶೆಟ್ಟಿ ಯಾನೆ ರತ್ನಾಕರ ಭಂಡಾರಿ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಗಣೇಶ ಶೆಟ್ಟಿ ಗೋಳ್ತಮಜಲು, ದೇವದಾಸ ಪೂಜಾರಿ ಅಡ್ಯನಡ್ಕ, ಕೆ. ಪದ್ಮನಾಭ ರೈ, ಶಾಂತಾರಾಮ ಶೆಟ್ಟಿ ಬೋಳಂತೂರು, ರಾಮಪ್ಪ ಪೂಜಾರಿ ಏಳ್ತಿಮಾರು, ಪಿ. ಬಟ್ಯಪ್ಪ ಶೆಟ್ಟಿ ನಿಟಿಲಾಪುರ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಮಾಣಿ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸಂತೋಷ್‌ ಕುಮಾರ್‌ ಶೆಟ್ಟಿ ಅರೆಬೆಟ್ಟು ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು.

ದೈವಕೃಪೆ
ದೇವರ ಸಂಕಲ್ಪದಂತೆ ಎಲ್ಲವೂ ನಡೆಯುತ್ತದೆ. ಇಲ್ಲಿ ಎಲ್ಲರೂ ಬಾಧ್ಯಸ್ಥರು. ನಮಗೆ ದೇವರ ಕೃಪೆ ಇದ್ದಾಗ ಮಾತ್ರ ಇಂತಹ ಅವಕಾಶಗಳು ಬರುವುದು. ದೈವಕೃಪೆಯೇ ಇಂತಹ ಸಾಧನೆಗಳಿಗೆ ಕಾರಣ.
– ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ

LEAVE A REPLY

Please enter your comment!
Please enter your name here