ಬಂಟ್ವಾಳ : ಕೊಳ್ನಾಡು ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಎ.23ರಿಂದ 29ರವರೆಗೆ ಏಳು ದಿನ ನಡೆದ ಶ್ರೀದೇವರ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದುಡಿದ ಸೇವಾಕರ್ತರಿಗೆ ರವಿವಾರ ದೇವಸ್ಥಾನದ ವಠಾರದಲ್ಲಿ ಅಭಿನಂದನ ಕಾರ್ಯಕ್ರಮ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ಜರಗಿತು.
ಈ ಸಂದರ್ಭ ಮಾತನಾಡಿದ ಅವರು, ಊರ, ಪರವೂರ ಭಕ್ತ ಬಂಧುಗಳು ಹಾಗೂ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸದಸ್ಯರಿಂದ ದೇವಸ್ಥಾನದಲ್ಲಿ ಬಹಳಷ್ಟು ಕೆಲಸ ಕಾರ್ಯಗಳು ನಡೆದಿವೆ. ದೇಣಿಗೆಗಿಂತ ಈ ಶ್ರಮ ಸೇವೆ ವಿಶೇಷ ಮೌಲ್ಯ ಉಳ್ಳದ್ದು. ನಿಸ್ವಾರ್ಥ ಸೇವೆ ಸಲ್ಲಿಸಿದ ಎಲ್ಲ ಕಾರ್ಯಕರ್ತ ಬಂಧುಗಳಿಗೆ ಶ್ರೀ ಗೋಪಾಲಕೃಷ್ಣ ಹಾಗೂ ಪರಿವಾರ ದೇವರುಗಳು, ಸ್ಥಳ ಸಾನ್ನಿಧ್ಯದ ದೈವ ಶಕ್ತಿಗಳು ಸಕಲ ಇಷ್ಠಾರ್ಥಗಳನ್ನು ಅನುಗ್ರಹಿಸಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸ ವದ ಲೆಕ್ಕ ಪತ್ರಗಳನ್ನು ಮಂಡಿಸಲಾಯಿತು. ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ಸಾಲೆತ್ತೂರು ವಲಯ ಮೇಲ್ವಿಚಾರಕಿ ಸುಜಾತಾ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪತ್ತುಮುಡಿ ಚಿದಾನಂದ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಿ.ಎಚ್. ಸೀತಾರಾಮ ಶೆಟ್ಟಿ, ರಾಮಕೃಷ್ಣ ನಾಯಕ್, ವಿಶ್ವನಾಥ ಬಂಗೇರ, ವಿಠಲ ಪ್ರಭು, ಈಶ್ವರ ಭಟ್, ಜಯರಾಮ ಶೇಖ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಚೈತ್ರಾ ತಿರಮಲೇಶ್ ಪ್ರಾರ್ಥಿಸಿದರು. ಹರ್ಷಿತ್ ಶೆಟ್ಟಿ ಸ್ವಾಗತಿಸಿ, ವಿಜಯ ಶೆಟ್ಟಿ ಸಾಲೆತ್ತೂರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.