Home ನಂಬಿಕೆ ಸುತ್ತಮುತ್ತ ಕಾರವಾರದ ಖಾಫ್ರಿ ದೇವರಿಗೆ ಮದ್ಯ, ಸಿಗರೇಟು ನೈವೇಧ್ಯ!

ಕಾರವಾರದ ಖಾಫ್ರಿ ದೇವರಿಗೆ ಮದ್ಯ, ಸಿಗರೇಟು ನೈವೇಧ್ಯ!

2091
0
SHARE

ಕಾರವಾರದ ಕೋಡಿಭಾಗದಲ್ಲಿ ಕಾಳಿ ನದಿ ಸೇತುವೆ ಪಕ್ಕವೇ ಇರುವ ಖಾಫ್ರಿ ದೇವಸ್ಥಾನದಲ್ಲಿ ಪ್ರತಿ ವರ್ಷ ದೇವಸ್ಥಾನದಲ್ಲಿ ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ ನಡೆಯುವ ಜಾತ್ರೆಯಲ್ಲಿ ‘ಗೋವಾ ಮದ್ಯ’ ದಿಂದ ದೇವರಿಗೆ ಅಭಿಷೇಕ ನಡೆಯುತ್ತದೆ. ಸಿಗರೇಟಿನ ಆರತಿ ನಡೆಯುತ್ತದೆ. ಕೋಳಿ ಕೊಯ್ದು ಮಾಂಸ ಅರ್ಪಣೆ ಮಾಡಲಾಗುತ್ತದೆ. ಹಣ್ಣು ಕಾಯಿ ಜತೆಗೆ ಗೋವಾದ ಬಿಯರ್, ವಿಸ್ಕಿ ತಂದು ದೇವರಿಗೆ ಅರ್ಪಿಸುತ್ತಾರೆ. ಕೋಳಿ ಬಲಿ ಕೊಟ್ಟು, ಬಾಳೆಗೊನೆಯಲ್ಲಿ ತುಲಾಭಾರ ಮಾಡಿಸಿ ಹರಕೆ ಒಪ್ಪಿಸುತ್ತಾರೆ.

ದೇವ ಮಾನವ ಖಾಫ್ರಿ: ದಕ್ಷಿಣ ಆಫ್ರಿಕಾದಿಂದ ಬಂದ ಖಾಫ್ರಿ ಎಂಬ ವ್ಯಕ್ತಿ ಇಲ್ಲಿ ಬಂದು ನೆಲೆಸಿದ ಬಡ ಜನರ ಸೇವೆ ಮಾಡುತ್ತಿದ್ದರಂತೆ. ಜನರಿಗೆ ಮಾಡುತ್ತಿದ್ದ ಸೇವನೆಯಿಂದ ಆತನನ್ನು ದೇವ ಮಾನವ ಎಂದೇ ನಂಬಿಕೊಂಡಿದ್ದರು. ಖಾಫ್ರಿ ಇದ್ದಕ್ಕಿದ್ದಂತೆ ಒಂದು ದಿನ ಮಾಯವಾದರು. ಆತನ ಹೆಸರಿನಲ್ಲಿ ಅನೇಕ ಪವಾಡ ನಡೆದವು. ಜನ ಅವರ ನೆನಪಿಗಾಗಿ ಗುಡಿ ಕಟ್ಟಿ ಪೂಜೆ ಸಲ್ಲಿಸಲು ಪ್ರಾರಂಭಿಸಿದರು. ಖಾಫ್ರಿಗೆ ಮದ್ಯ, ಧೂಮಪಾನ ಹಾಗೂ ಕೋಳಿ ಮಾಂಸ ಪ್ರಿಯವಾಗಿತ್ತಂತೆ. ಇದರಿಂದ ಭಕ್ತರು ಇಂದಿಗೂ ಜಾತ್ರೆ ದಿನ ಖಾಫ್ರಿ ದೇವರಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ.

ಹಿಂದೂಗಳ ಪೂಜೆ: ಖಾಫ್ರಿ ಕ್ರಿಶ್ಚಿಯನ್. ಹೀಗಾಗಿ ದೇವಸ್ಥಾನದ ಹೊರಗೆ ಮೇಣದ ಬತ್ತಿ ಉರಿಸಿ ಗೌರವ ಸಲ್ಲಿಸಲಾಗುತ್ತದೆ. ಪೂಜೆಗಳು ಹಿಂದೂ ಪದ್ದತಿಯಂತೆ ನಡೆಯುತ್ತವೆ.
ಈ ದೇವರಿಗೆ ವಿಸ್ಕಿ, ಬ್ರಾಂಡಿಯೇ ನೈವೇದ್ಯ ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ಕಾಲ ಭೈರವ ಸ್ವಾಮಿ ದೇವಾಲಯವಿದೆ. ಕಾಲ ಭೈರವ ಸ್ವಾಮಿ ನಗರದ ರಕ್ಷಕನೆಂದೇ ಇಲ್ಲಿನ ಜನರು ನಂಬುತ್ತಾರೆ. ಈ ದೇವಾಲಯ ಶಿಪ್ರಾ ನದಿಯ ದಂಡೆಯಲ್ಲಿದ್ದು, ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುತ್ತಾರೆ.

ಅಷ್ಟ ಭೈರವ ಶೈವ ಸಂಪ್ರದಾಯದ ಒಂದು ಭಾಗವಾಗಿದೆ. ಮದ್ಯ, ಮಾಂಸ, ಮೀನು, ಮುದ್ರ (ಹುರಿದ ಧಾನ್ಯ) ಮತ್ತು ಮೈಥುನ (ಲೈಂಗಿಕ ಸಂಭೋಗ) ಹೀಗೆ ಪಂಚಮಕರದ ಐದು ತಂತ್ರ ಆಚರಣೆಗಳನ್ನು ಈ ದೇವಾಲಯದಲ್ಲಿ ಮಾಡಲಾಗುತ್ತದೆ. ಮದ್ಯವನ್ನು ದೇವರಿಗೆ ನೈವೇದ್ಯ ಮಾಡಿದರೂ ಉಳಿದ ನಾಲ್ಕು ಅರ್ಪಣೆಗಳನ್ನು ಸಾಂಕೇತಿಕ ಆಚರಣೆಗಳ ರೂಪದಲ್ಲಿ ನೀಡಲಾಗುತ್ತದೆ.

LEAVE A REPLY

Please enter your comment!
Please enter your name here