ಸುಬ್ರಹ್ಮಣ್ಯ: ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಪರಿವಾರ ದೈವಗಳ ನೂತನ ಸಂಪೂರ್ಣ ಶಿಲೆಕಲ್ಲಿನಿಂದ ತಾಮ್ರದ ಹೊದಿಕೆಯ ಮಾಡಿನಿಂದ ಅಪೂರ್ವವಾಗಿ ನಿರ್ಮಾಣವಾಗಿರುವ ಶ್ರೀ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಅವಳಿ ದೈವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶವು ಜ. 19 ಮತ್ತು 20ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ.
ಜ. 19ರ ರಾತ್ರಿ ದೇವತಾ ಪ್ರಾರ್ಥನೆ, ಆಚಾರ್ಯ ವರಣೆ, ಪ್ರಾಸಾದ ಪರಿಗ್ರಹ, ಸ್ವಸ್ತಿ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಅಘೋರ ಹೋಮ, ವಾಸ್ತುವಾಹನೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ಪ್ರಾಕಾರ ಬಲಿ, ಪ್ರಸಾದ ವಿತರಣೆ ಜ. 20ರ ಬೆಳಗ್ಗೆ ಮಹಾಗಣಪತಿ ಹೋಮ, ತಿಲಹೋಮ, ವಿಷ್ಣು ಸಾಯುಜ್ಯ ಹೋಮ, ಬ್ರಹ್ಮ ಕಲಶಪೂಜೆ, 9. 27ರ ಅನಂತರ ಕುಂಭ ಲಗ್ನ ಶುಭಮುಹೂರ್ತದಲ್ಲಿ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ತಂಬಿಲಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಉಳ್ಳಾಕುಲು, ಕಾಚುಕುಜುಂಬ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ ನೇಮ ನಡೆಯಲಿದೆ. ಜ. 24ರಂದು ವರ್ಷಾ ವಧಿ ಜಾತ್ರೆಗೆ ಗೊನೆ ಕಡಿಯುವ ಕಾರ್ಯ ಜರಗಲಿದೆ. ಅಂದು ಅಂಗಡಿ ಸ್ಥಳ ಏಲಂ ನಡೆಯಲಿದೆ.