Home ಧಾರ್ಮಿಕ ಕಾರ್ಯಕ್ರಮ ಇಂದು ಬೆದ್ರಬೆಟ್ಟುವಿನಲ್ಲಿ ಚರ್ಚ್‌ ಉದ್ಘಾಟನೆ

ಇಂದು ಬೆದ್ರಬೆಟ್ಟುವಿನಲ್ಲಿ ಚರ್ಚ್‌ ಉದ್ಘಾಟನೆ

857
0
SHARE

ಬೆಳ್ತಂಗಡಿ : ಬೆದ್ರಬೆಟ್ಟು ಬಂಗಾಡಿಯಲ್ಲಿ ನವೀಕರಣಗೊಂಡ ಚರ್ಚ್‌ನ ಪವಿತ್ರೀಕರಣ ಹಾಗೂ ಉದ್ಘಾಟನ ಕಾರ್ಯಕ್ರಮ ಎ. 14ರಂದು ಸಂಜೆ ನಡೆಯಲಿದೆ.

ದೇವಾಲಯದ ಪವಿತ್ರೀಕರಣ ವಿಧಿ, ದೇವಾಲಯ ಪ್ರತಿಷ್ಠಾ ವಿಧಿಗಳು ಹಾಗೂ ವಾರ್ಷಿಕ ಹಬ್ಬಗಳು ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಬಿಷಪ್‌ ಲಾರೆನ್ಸ್‌ ಮುಕ್ಕುಯಿ ನೇತೃತ್ವದಲ್ಲಿ ನೆರವೇರಲಿದೆ.

ವಿಕಾರ್‌ ಜನರಲ್‌ ಫಾ| ಜೋಸ್‌ ವಲಿಯಪರಂಬಿಲ್‌, ಸಿದ್ಧಾಪುರ ಫೋರೆನ್‌ ವಿಕಾರ್‌ ಫಾ| ಮಾಣಿ ವೆಳುತ್ತೆಡತ್ತ್ ಪರಂಬಿಲ್‌ ಭಾಗವಹಿಸಲಿದ್ದಾರೆ. ರಾತ್ರಿ ಸಾರ್ವಜನಿಕ ಸಮ್ಮೇಳನದಲ್ಲಿ ಕುದ್ರೋಳಿ ಗಣೇಶ್‌ ತಂಡದಿಂದ ಜಾದೂ ಪ್ರದರ್ಶನವಿದೆ.

ಎ. 15ರಂದು ಸಂಜೆ ವಿಧಾನಪೂರ್ವಕ ರಾಸ, ಬಲಿಪೂಜೆ, ಪ್ರವಚನ, ಹಬ್ಬದ ಮೆರವಣಿಗೆ ನಡೆಯಲಿದ್ದು, ತಲಶ್ಯೆರಿ ಧರ್ಮಪ್ರಾಂತದ ಫಾ| ಜೋಸೆಫ್‌ ಮೇಙಕುನ್ನೇಲ್‌, ಕಂಕನಾಡಿಯ ಫಾ| ಜೋಸೆಫ್‌ ಕೆಳಂಪರಂಬಿಲ್‌, ಉಜಿರೆಯ ಫಾ| ಜೋಸೆಫ್‌ ಮುಕ್ಕಾಟ್‌ ಭಾಗವಹಿಸಲಿದ್ದಾರೆ.

ಎ. 16ರಂದು ವಿಧಾನಪೂರ್ವಕ ಬಲಿಪೂಜೆ ನಡೆಯಲಿದ್ದು, ಬೆಳ್ತಂಗಡಿ ಬಿಷಪ್‌ ಹೌಸ್‌ನ ಫಾ| ಅಬ್ರಾಹಂ ಪಟ್ಟೇರಿಲ್‌, ಫೋರೆನ್‌ ಏಕಾರ್‌ನ ಫಾ| ಜೋಸೆಫ್‌ ಕುರಿಯಾಳಶ್ಯೆàರಿ, ಗುತ್ತಿಗಾರಿನ ಫಾ| ತೋಮಸ್‌ ಪನಚಿಕಲ್‌, ಜ್ಞಾನನಿಲಯದ ಫಾ| ಜೋಸೆಫ್‌ ಮಟ್ಟಂ ಭಾಗವಹಿಸಲಿದ್ದಾರೆ. ಸಿಮಿತೇರಿ ಸಂದರ್ಶನದಲ್ಲಿ ವಿಕಾರ್‌ ಜನರಲ್‌ ಫಾ| ಜೋಸ್‌ ವಲಿಯ ಪರಂಬಿಲ್‌ ಆಶೀರ್ವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here