Home ಧಾರ್ಮಿಕ ಸುದ್ದಿ ಕ್ರಿಸ್ಮಸ್‌ ಹಬ್ಬಕ್ಕೆ ಇನ್ನು ಹತ್ತು ದಿನ: ಎಲ್ಲೆಡೆ ಭರದ ಸಿದ್ಧತೆ

ಕ್ರಿಸ್ಮಸ್‌ ಹಬ್ಬಕ್ಕೆ ಇನ್ನು ಹತ್ತು ದಿನ: ಎಲ್ಲೆಡೆ ಭರದ ಸಿದ್ಧತೆ

989
0
SHARE

ಹಿಲರಿ ಕ್ರಾಸ್ತಾ
ಮಹಾನಗರ, : ಕ್ರಿಸ್ಮಸ್‌ ಹಬ್ಬಕ್ಕೆ ಇನ್ನು ಹತ್ತು ದಿನಗಳು ಮಾತ್ರ ಉಳಿದಿವೆ. ಕ್ರಿಸ್ಮಸ್‌ ಆಚರಣೆಗೆ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ. ಕ್ರೆಸ್ತರ ಮನೆಗಳಲ್ಲಿ, ಚರ್ಚ್‌ಗಳಲ್ಲಿ, ಅಂಗಡಿ ಮಳಿಗೆಗಳಲ್ಲಿ, ಮಾಲ್‌ಗ‌ಳಲ್ಲಿ ವಿವಿಧ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.

ಧಾರ್ಮಿಕ ನೆಲೆಯಲ್ಲಿ ಚರ್ಚ್‌ಗಳಲ್ಲಿ ನಾಲ್ಕು ವಾರಗಳ ಪೂರ್ವಭಾವಿ ಸಿದ್ಧತೆ “ಅಡ್ವೆಂಟ್‌’ ಡಿ. 2ರಂದು ರವಿವಾರ ಆರಂಭವಾಗಿದೆ. “ಅಡ್ವೆಂಟ್‌” ಅವಧಿಯಲ್ಲಿ ಅಂದರೆ ಕ್ರಿಸ್ಮಸ್‌ ವರೆಗಿನ ನಾಲ್ಕು ರವಿವಾರಗಳಲ್ಲಿ ಚರ್ಚ್‌ನಲ್ಲಿ ಬಲಿ ಪೂಜೆಗಳು ಯೇಸು ಕ್ರಿಸ್ತರ ಜನನದ ಹಬ್ಬವನ್ನು ಮುಖ್ಯ ವಿಷಯವನ್ನಿಟ್ಟುಕೊಂಡು ನಡೆಯುತ್ತವೆ.

ಕ್ರೈಸ್ತರ ಮನೆಗಳಲ್ಲಿ ಮತ್ತು ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಸಂಬಂಧಿತ ಗೋದಲಿ (ಕ್ರಿಬ್‌) ರಚನೆಗೆ ತಯಾರಿಗಳು ನಡೆದಿವೆ. ಕ್ರಿಸ್ಮಸ್‌ ಗೀತೆಗಳ (ಕ್ಯಾರಲ್‌) ಗಾಯನಕ್ಕೆ ಸಂಬಂಧಿಸಿ ಚರ್ಚ್‌ಗಳಲ್ಲಿ ತರಬೇತಿ ಪ್ರಾರಂಭವಾಗಿದೆ. ಭಾರತೀಯ ಕ್ರೈಸ್ತ ಯುವ ಸಂಚಾಲನ (ಐಸಿವೈಎಂ) ಮತ್ತು ಇತರ ಸಂಘಟನೆಗಳ ಸಹಕಾರದಿಂದ ಕ್ರೈಸ್ತರ ಮನೆಗಳಿಗೆ ತೆರಳಿ ಕ್ರಿಸ್ಮಸ್‌ ಸಂದೇಶ ಸಾರುವ ಕ್ರಿಸ್ಮಸ್‌ ಕ್ಯಾರಲ್ಸ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಭರ್ಜರಿ ವ್ಯಾಪಾರ ಕ್ರಿಸ್ಮಸ್‌ ಸಂತೋಷವನ್ನು ಪರರಲ್ಲಿ ಹಂಚಿಕೊಳ್ಳಲು ಕಳುಹಿಸುವ ಕ್ರಿಸ್ಮಸ್‌ ಶುಭಾಶಯ ಕಾರ್ಡ್‌ಗಳು, ಗೋದಲಿ, ಮನೆ ಮತ್ತು ಮನೆಯ ಆವರಣ, ಚರ್ಚ್‌ಗಳನ್ನು ಅಲಂಕರಿಸುವ ನಕ್ಷತ್ರಗಳು, ಘಂಟೆ (ಬೆಲ್‌) ಗಳ ಸಾಲು, ಕ್ರಿಸ್ಮಸ್‌ ಟ್ರೀ, ಸಾಂತಕ್ಲಾಸ್‌ ವೇಷ ಭೂಷಣ ಇತ್ಯಾದಿಗಳು ಮಾರುಕಟ್ಟೆಗೆ ಬಂದಿದ್ದು, ಅಂಗಡಿ ಮಳಿಗೆಗಳಲ್ಲಿ ರಾರಾಜಿಸುತ್ತಿವೆ. ಅವುಗಳ ಭರ್ಜರಿ ಮಾರಾಟವೂ ನಡೆಯುತ್ತಿದೆ.

ಮಾಲ್‌, ಮಳಿಗೆಗಳಲ್ಲಿ ಹಾಗೂ ದೊಡ್ಡ ಹೊಟೇಲ್‌ಗ‌ಳಿರುವ ಕಟ್ಟಡಗಳು ವಿದ್ಯುತ್‌ ದೀಪಗಳಿಂದ ಅಲಂಕೃತವಾಗಿವೆ. ಕ್ರಿಸ್ಮಸ್‌ ಡೆಕೊರೇಶನ್‌ಗೆ ವೈವಿಧ್ಯಮಯ ಆಲಂಕಾರಿಕ ವಸ್ತುಗಳು ಬಂದಿವೆ. ನಗರದ ಮಿಲಾಗ್ರಿಸ್‌ ಪರಿಸರದ ಕಟ್ಟಡದ ಅಂಗಡಿ ಮಳಿಗೆಗಳಲ್ಲಿ ಇವು ಅಧಿಕ ಸಂಖ್ಯೆಯಲ್ಲಿ ರಾರಾಜಿಸುತ್ತಿವೆ.

ಕ್ರಿಸ್ಮಸ್‌ ಟ್ರೀ ಆಕರ್ಷಣೆ ಸ್ಥಳೀಯವಾಗಿ ತಯಾರಿಸಿದ ಹಾಗೂ ಆಮದು ಮಾಡಿದ 5 ಇಂಚಿನಿಂದ 27 ಇಂಚು ಎತ್ತರದವರೆಗಿನ ಕ್ರಿಸ್ಮಸ್‌ ಕ್ರಿಬ್‌ ಸೆಟ್‌ ಇದೆ. 1 ಅಡಿಯಿಂದ 12 ಅಡಿ ಎತ್ತರದವರೆಗಿನ ಸ್ಥಳೀಯ ಮತ್ತು ಆಮದಿತ ಕ್ರಿಸ್ಮಸ್‌ ಟ್ರೀ ಇನ್ನೊಂದು ಆಕರ್ಷಣೆ. ವಿವಿಧ ವಿಗ್ರಹಗಳು, ರೋಸರಿಗಳು, ಕ್ಯಾಂಡಲ್‌ ಮತ್ತು ಕ್ಯಾಂಡಲ್‌ ಸೆಟ್‌, ಸ್ಪೆಷಲ್‌ ಬೆಲ್‌ ಗಳು, ಸಾಂತಾ ಕ್ಲಾಸ್‌ ಡ್ರೆಸ್‌, ಲೈಟಿಂಗ್ಸ್‌, ಬಗೆ ಬಗೆಯ ನಕ್ಷತ್ರಗಳು ಆವಕವಾಗಿವೆ.

ಕ್ರಿಸ್ಮಸ್‌ ಕೇಕ್‌
ಬೇಕರಿಗಳಲ್ಲಿ ಕ್ರಿಸ್ಮಸ್‌ ಕೇಕ್‌ ಮತ್ತು ಕ್ರಿಸ್ಮಸ್‌ ವಿಶೇಷ ತಿಂಡಿ “ಕುಸ್ವಾರ್‌’ ತಯಾರಿ ಪ್ರಕ್ರಿಯೆ ಆರಂಭವಾಗಿದೆ. ಕ್ರಿಸ್ಮಸ್‌ ಸ್ಪೆಷಲ್‌ ಕೇಕ್‌ ಜತೆಗೆ ವಿವಿಧ ನಮೂನೆಯ ಕೇಕ್‌ಗಳಾದ
ಆರ್ಡಿನರಿ ಪ್ಲಮ್‌ ಕೇಕ್‌, ಘೀ ಪ್ಲಮ್‌ ಕೇಕ್‌, ವೈಟ್‌ ಪ್ಲಮ್‌ ಕೇಕ್‌, ಎಗ್‌ಲೆಸ್‌ ಪ್ಲಮ್‌ ಕೇಕ್‌, ಶುಗರ್‌ ಘೀ ಪ್ಲಮ್‌ ಕೇಕ್‌ಗಳನ್ನು ಕೂಡಾ ತಯಾರಿಸಲಾಗುತ್ತಿದೆ. ನಗರದ
ಆಯ್ದ ಕೆಲವು ಪ್ರಮುಖ ಹೊಟೇಲ್‌ಗ‌ಳಲ್ಲಿ ಕೇಕ್‌ ತಯಾರಿಸುವ ಕಚ್ಛಾ ವಸ್ತುಗಳನ್ನು ಮಿಶ್ರಣ ಮಾಡುವ ಕಾರ್ಯ ಈಗಾಗಲೇ ನಡೆದಿದೆ.

ವಿದೇಶಕ್ಕೂ ರವಾನೆ ಕ್ರಿಸ್ಮಸ್‌ ಡೆಕೊರೇಶನ್‌ಗೆ ಸಂಬಂಧಿಸಿದ ಐಟಂಗಳು ಮಂಗಳೂರಿನಿಂದ ವಿದೇಶಕ್ಕೂ ಹೋಗುತ್ತಿವೆ. ಆಸ್ಟ್ರೇಲಿಯಾ, ಲಂಡನ್‌ ಮತ್ತು ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗುತ್ತಿವೆ. ಗೋವಾದ ಜನರು ಕೂಡಾ ಮಂಗಳೂರಿಗೆ ಬಂದು ಕ್ರಿಸ್ಮಸ್‌ ಆಚರಣೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಕ್ರಿಬ್‌ ಸೆಟ್‌ಗಳು ಅಧಿಕ ಪ್ರಮಾಣದಲ್ಲಿ ಹೊರ ದೇಶಗಳಿಗೆ ರಫ್ತಾಗುತ್ತಿವೆ.

ಕಳೆದ ವರ್ಷಕ್ಕಿಂತ ಅಧಿಕ ಮಾರಾಟ
ಈ ವರ್ಷ ನವೆಂಬರ್‌ 15ರ ವೇಳೆಗೆ ಕ್ರಿಸ್ಮಸ್‌ ಸಂಬಂಧಿತ ವಸ್ತುಗಳು ಮಾರುಕಟ್ಟೆಗೆ ಬಂದಿದ್ದು, ಮಾರಾಟವೂ ಆರಂಭವಾಗಿದೆ. ಪ್ರಸ್ತುತ ಮಾರಾಟ ವ್ಯವಹಾರ ಚೆನ್ನಾಗಿ
ನಡೆಯುತ್ತಿದೆ. ಈಗಾಗಲೇ ಕಳೆದ ವರ್ಷಕ್ಕಿಂತ ಜಾಸ್ತಿ ಮಾರಾಟ ನಡೆದಿದೆ. ಬೆಲೆ ಹೆಚ್ಚಳವಾಗಿಲ್ಲ; ಕಳೆದ ವರ್ಷದಷ್ಟೇ ಇದೆ.
 - ಜಾನ್‌ ಮೊಂತೇರೊ, ವ್ಯಾಪಾರಿ ಸರ್ಧಾತ್ಮಕ

ಬೆಲೆಗಳಲ್ಲಿಲಭ್ಯ ಮಂಗಳೂರಿನಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಕಿಸ್ಮಸ್‌ ಆಲಂಕಾರಿಕ ವಸ್ತುಗಳು ಸಿಗುತ್ತಿವೆ. ಹಾಗಾಗಿ ಇಲ್ಲಿಂದ ವಿದೇಶಗಳಿಗೆ, ಗೋವಾ ರಾಜ್ಯಕ್ಕೆ ಕೊಂಡೊಯ್ಯಲು
ಕಾರಣ.
– ಸ್ಟ್ಯಾನಿ ಅಲ್ವಾರಿಸ್‌, ಕ್ರೈಸ್ತ ಮುಖಂಡ

LEAVE A REPLY

Please enter your comment!
Please enter your name here