ಬ್ರಹ್ಮಾವರ: ಕೂರಾಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರೀ ಮತ್ತು ನಾಗ ಹಾಗೂ ಪರಿವಾರ ದೇವತೆಗಳ ದೇಗುಲದಲ್ಲಿ ಮೇ 29ರಂದು ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಜರಗಲಿದೆ.
ಮೇ 28ರಂದು ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮೇ 29ರಂದು ಬೆಳಗ್ಗೆ ಬ್ರಹ್ಮಸ್ಥಾನದಿಂದ ಜೀವಕುಂಭವನ್ನು ಮೆರವಣಿಗೆಯಲ್ಲಿ ತರಲಾಗುವುದು. ಬೆಳಗ್ಗೆ 10.30ಕ್ಕೆ ಶ್ರೀ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ದರ್ಶನ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಸಭೆ
ಮೇ 29ರ ಮಧ್ಯಾಹ್ನ 12ಕ್ಕೆ ನಡೆಯುವ ಸಭೆಯಲ್ಲಿ ವಿಜಯ ಮಂಜರ್ ಪಾಂಡೇಶ್ವರ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ನಿವೃತ್ತ ಪ್ರಾಂಶುಪಾಲ ಬಿ. ಸೀತಾರಾಮ ಶೆಟ್ಟಿ ಬಾರಕೂರು ಅಧ್ಯಕ್ಷತೆ ವಹಿಸಲಿದ್ದು ಕೂರಾಡಿ ನಾಗಬ್ರಹ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಕೆ. ಕೃಷ್ಣದೇವ ಕಲ್ಕೂರ, ಕೂರಾಡಿ ಚಿತ್ತೇರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ರವೀಂದ್ರನಾಥ ಶೆಟ್ಟಿ, ಕೂರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಶೇಖರ ಹೆಗ್ಡೆ, ಹನೆಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ ವಿ. ಆಚಾರ್ಯ, ಸದಸ್ಯ ಗೋಪಾಲ ಎಂ., ಉದ್ಯಮಿಗಳಾದ ಸುರೇಂದ್ರ ಎ. ಶೆಟ್ಟಿ ಬೆಳಗಾಂ, ಚಂದ್ರಶೇಖರ ಆರ್. ಶೆಟ್ಟಿ ಕಟಪಾಡಿ, ನಿವೃತ್ತ ಜೀವವಿಮಾ ಅಭಿವೃದ್ದಿ ಅಧಿಕಾರಿ ಎನ್. ವೀರಣ್ಣ ಶೆಟ್ಟಿ, ಅರ್ಚಕ ಕೆ. ಪ್ರಭಾಕರ ಬಾೖರಿ ಉಪಸ್ಥಿತರಿರಲಿದ್ದಾರೆ.