ಸುರತ್ಕಲ್: ನವಗಿರಿ ಸೇವಾ ಟ್ರಸ್ಟ್ ಹೊಸಬೆಟ್ಟು ಇದರ ಯುವ ಸಂಘಟನೆ ಯುವ ಚೇತನ ಹೊಸಬೆಟ್ಟು ಕುಳಾಯಿ ಇದರ ಸದಸ್ಯರು ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಬಯಲಾಟ, ಧಾರ್ಮಿಕ ಸಭೆ ಆಯೋಜಿಸಲಾಗಿತ್ತು.
ಆಶೀರ್ವಚನ ಅಗರಿ ರಘುರಾಮ ಭಾಗವತ ಉದ್ಘಾಟಿಸಿದರು. ಚಿತ್ರಾಪುರ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಶರನ್ನವರಾತ್ರಿಯ ಕುರಿತು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಅಗರಿ ರಾಘವೇಂದ್ರ ರಾವ್, ಕಾರ್ತಿಕ್ ಭಟ್ ಚಿತ್ರಾಪುರ, ಕಾರ್ತಿಕ್ ಭಟ್, ಶ್ರೀನಿವಾಸ್ ಕುಳಾಯಿ ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ ಚಂಡಿಕಾಯಾಗ ಈ ಸಂದರ್ಭ ರಾಘವೇಂದ್ರ ಎಚ್ .ವಿ. ಮುಂದಾಳತ್ವದಲ್ಲಿ ವೇ|ಮೂ| ಶ್ರೀನಿವಾಸಾಚಾರ್ ಪೌರೋಹಿತ್ಯದಲ್ಲಿ ಶ್ರೀ ಕ್ಷೇತ್ರದಲ್ಲಿ ಚಂಡಿಕಾಯಾಗ ಜರಗಿತು.