ಅಜೆಕಾರು: ಶ್ರೀ ಮಹಾವಿಷ್ಣುಮೂರ್ತಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನ ಚಿಕ್ಕಲ್ ಬೆಟ್ಟು ಇದರ ವಾರ್ಷಿಕ ಗೌಣೋತ್ಸವವು ವೇ| ಮೂ| ಜೆ.ಎಲ್. ನಾರಾಯಣ ತಂತ್ರಿ ಮತ್ತು ಪ್ರಸಾದ್ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭ ಚಿಕ್ಕಲ್ಬೆಟ್ಟು ಯುವಕ ಸಂಘದವರಿಂದ ಯಕ್ಷಗಾನ ಕೂಟ ನಡೆಯಿತು. ದೇವರ ಬಲಿಪೂಜೆ ಹಾಗೂ ರಾಜಂದೈವ, ಕೊಡಮಣಿತ್ತಾಯ, ಕುಕ್ಕಿನಂತಾಂಯ, ರಕ್ತೇಶ್ವರಿ, ಬೈದರ್ಕಳ ನೇಮೋತ್ಸವ ನೆರವೇರಿತು.
ಉತ್ಸವದಲ್ಲಿ ಅರ್ಚಕ ಲಕ್ಷ್ಮೀ ಜನಾರ್ದನ ಭಟ್, ಅಧ್ಯಕ್ಷ ಯಜ್ಞ ನಾರಾಯಣ ಭಟ್, ಭಜನಾ ಮಂಡಳಿ ಗೌರವ ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಭಜನ ಮಂಡಳಿ ಅಧ್ಯಕ್ಷ ಜಗತ್ಪಾಲಅತಿಕಾರಿ ಸದಸ್ಯರಾದ ಸಿರಿಯಣ್ಣ ಶೆಟ್ಟಿ, ತಾರಾನಾಥ ಶೆಟ್ಟಿ, ದಿನೇಶ್ ಪೂಜಾರಿ, ಶಿವರಾಮ ಪೂಜಾರಿ, ಕೃಷ್ಣ ನಾಯಕ್, ನಿತ್ಯಾನಂದ ನಾೖಕ್, ಪ್ರೇಮ ಶೆಟ್ಟಿ, ಆಶಾ ಮಡಿವಾಳ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.