ಉಡುಪಿ: ಚಿಟ್ಪಾಡಿಬೀಡು ಶ್ರೀದೇವಿ ಭೂದೇವಿ ಸಹಿತ ಶ್ರೀ ಶ್ರೀನಿವಾಸ ದೇಗುಲದಲ್ಲಿ ಪುನರುತ್ಥಾನ ಪ್ರವೃತ್ತಿ ಪ್ರಯುಕ್ತ ಶನಿವಾರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಮುಷ್ಟಿ ಕಾಣಿಕೆ ಸಮರ್ಪಣೆಯು ವಿದ್ವಾನ್ ರಾಘವೇಂದ್ರ ತಂತ್ರಿ ಕುಕ್ಕಿಕಟ್ಟೆ ಅವರ ಪೌರೋಹಿತ್ಯದಲ್ಲಿ ಸಂಪನ್ನಗೊಂಡಿತು.
12 ಕಾಯಿ ಗಣಯಾಗ, ಮೃತ್ಯುಂಜಯ ಜಪ, ಸರ್ಪ ಸಂಸ್ಕಾರ, ಆಶ್ಲೇಷಾ ಬಲಿ, ವಿವಿಧ ಆರಾಧನೆಗಳೊಂದಿಗೆ ಧಾರ್ಮಿಕ ಪ್ರಕ್ರಿಯೆಗಳು ಜರಗಿದವು.
ದೇಗುಲದ ಆಡಳಿತ ಮೊಕ್ತೇಸರ ಡಾ| ಗೋಪಾಲಕೃಷ್ಣ ಬಲ್ಲಾಳ್ ಚಿಟ್ಪಾಡಿಬೀಡು, ಡಾ| ಸಿ.ಆರ್. ಬಲ್ಲಾಳ್ ಮಂಗಳೂರು, ಗೌತಮ್ ಬಲ್ಲಾಳ್, ಲಕ್ಷ್ಮೀಶ ಬಲ್ಲಾಳ್, ಗೀತಾ ಬಲ್ಲಾಳ್, ಕೃಷ್ಣದಾಸ ಬಲ್ಲಾಳ್ ಚಿಟ್ಪಾಡಿಬೀಡು, ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ಅಧ್ಯಕ್ಷ ಅಗರಿ ಭಾಸ್ಕರ ರಾವ್ ಮತ್ತು ಸದಸ್ಯರು, ಶ್ರೀನಾಗೇಶ್ ಹೆಗ್ಡೆ, ಊರಿನ ಗುರಿಕಾರರಾದ ಅಪ್ಪು ಶೆಟ್ಟಿ, ಗುಂಡು ಶೆಟ್ಟಿ, ಶಂಕರ ಶೆಟ್ಟಿ, ಮುದ್ದ ಪೂಜಾರಿ, ಗಣ್ಯರು, ಭಕ್ತರು ಉಪಸ್ಥಿತರಿದ್ದರು.